ರಾಜ್ಯಸಭೆಯಲ್ಲಿ ಗದ್ದಲ, ಪ್ರತಿಭಟನೆ ನಡುವೆ 2 ಕೃಷಿ ಮಸೂದೆ ಪಾಸ್;
ಪ್ರಜಾಪ್ರಭುತ್ವದ ಕೊಲೆ ಎಂದ ವಿಪಕ್ಷಗಳು

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ವಿರೋಧ ಪಕ್ಷಗಳ ಪ್ರತಿಭಟನೆ, ಗದ್ದಲ, ಗೊಂದಲಗಳ ನಡುವೆ ರಾಜ್ಯಸಭೆಯಲ್ಲಿ ಮೂರು ಮಹತ್ವದ ಕೃಷಿ ಮಸೂದೆಗಳ ಪೈಕಿ ಎರಡನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

Advertisement

ಅಂಗೀಕಾರಕ್ಕೆ ಅಗತ್ಯವಾದ ಬಹುಮತ ಸರ್ಕಾರದ ಬಳಿಯಿಲ್ಲ. ಧ್ವನಿಮತದ ಬದಲು ಮತದಾನ ನಡೆಯಬೇಕು ಎಂದು ವಿಪಕ್ಷಗಳು ಆಗ್ರಹಿಸಿದವು.

ಕಲಾಪ ಆರಂಭವಾದಾಗ ವಿಪಕ್ಷಗಳು ಮಸೂದೆಗಳನ್ನು ‘ಸೆಲೆಕ್ಟ್ ಸಮಿತಿ’ಗೆ ಕಳಿಸಬೇಕು ಎಂದು ಪಟ್ಟು ಹಿಡಿದವು. ಆದರೆ ಇದನ್ನು ತಳ್ಳಿ ಹಾಕಿದ ಉಪ ಸಭಾಪತಿ ಧ್ವನಿಮತಕ್ಕೆ ಹಾಕಿದರು.
ವಿಪಕ್ಷಗಳ ಸದಸ್ಯರು ಸದನದ ಬಾವಿಯಲ್ಲಿ ಜಮೆಯಾಗಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೆಲವರು ನಿಯಮ ಪುಸ್ತಕವನ್ನು ಹರಿದು ಹಾಕಿದರು.

‘ಎಲ್ಲ ನಿಯಮಗಳನ್ನು ಮೀರಿ ಅಂಗೀಕಾರ ಪಡೆಯಲಾಗಿದೆ’ ಎಂದು ಗುಲಾಂ ನಬಿ ಅಜಾದ್ ಟೀಕಿಸಿದರು. ಟಿಎಂಸಿ ಸಂಸದ ಡೆರೆಕ್ ಒ ಬ್ರೇನ್ ಟ್ವೀಟ್ ಮಾಡಿ, ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಅಂಗೀಕಾರಕ್ಕೆ ಅಗತ್ಯ ಸಂಖ್ಯೆ ಇಲ್ಲದ ಕಾರಣಕ್ಕೆ ಧ್ವನಿಮತದ ಮೊರೆ ಹೋಗಿ ಅಂಗೀಕಾರ ಪಡೆಯಲಾಗಿದೆ. ‘ಆರ್‌ಎಸ್ ಟಿವಿ’ಯ ಸಂಪರ್ಕವನ್ನು ಕಡಿದು ಹಾಕಿ, ಇಲ್ಲಿ ನಡೆದ ಅಪ್ರಜಾಸತ್ತಾತ್ಮಕ ಸಂಗತಿಗಳು ಹೊರಜಗತ್ತಿಗೆ ಗೊತ್ತಾಗದಂತೆ ಮಾಡಲು ಸರ್ಕಾರ ಯತ್ನಿಸಿದೆ ಎಂದು ಟೀಕಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here