ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವೀರಶೈವ ರ‍್ಮ ಸಂಸ್ಥಾಪಕರು ಮತ್ತು ಮಾನವರ‍್ಮ ಉದ್ಧಾರಕ್ಕಾಗಿ ಅವತಾರವೆತ್ತಿದ ಜ.ಶ್ರೀ ರೇಣುಕಾಚಾರ್ಯರ ತತ್ವ-ಸಿದ್ಧಾಂತಗಳನ್ನು ವಿದ್ಯರ‍್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕಿ ಎನ್.ವಿ. ಕುಲರ‍್ಣಿ ಹೇಳಿದರು.
ಶಿಗ್ಲಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜ.ಶ್ರೀ ರೇಣುಕಾಚರ‍್ಯ ಜಯಂತಿ ಆಚರಣೆ ಕರ‍್ಯಕ್ರಮದಲ್ಲಿ ಅವರು ಮಾತನಾಡಿ, ಜಗದ್ಗುರು ಶ್ರೀ ರೇಣುಕಾಚರ‍್ಯರು ಸಿದ್ಧಾಂತ ಶಿಖಾಮಣಿಯಂತಹ ಮಹಾನ್ ಗ್ರಂಥದ ಮೂಲಕ ಸಾಮರಸ್ಯ, ಸಹಬಾಳ್ವೆ, ಸೌಹರ‍್ದತೆಯ ಬದುಕನ್ನು ಬೋಧಿಸಿದ್ದಾರೆ ಎಂದರು.
ರ‍್ಮಾಭಿಮಾನಿ ವೀರಣ್ಣ ಪವಾಡದ ಮಾತನಾಡಿ, ದೇವರ ಸ್ವರೂಪಿಯಾದ ಜಗದ್ಗುರು ರೇಣುಕಾಚರ‍್ಯರ ತತ್ವ-ಸಿದ್ಧಾಂತಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶ್ರೀ ಜ.ರೇಣುಕಾಚರ‍್ಯರು ಜಗತ್ತಿನ ಧರ‍್ಮಿಕ ಇತಿಹಾಸದಲ್ಲಿ ಅಪರೂಪದ ರ‍್ಮಸಿದ್ಧಾಂತ ಬೋಧಿಸಿ ಮನುಕುಲವನ್ನು ಉದ್ಧರಿಸಿದ್ದಾರೆ. ಅಹಿಂಸೆ, ಸತ್ಯ, ಕಳ್ಳತನ ಮಾಡದಿರುವುದು, ಬ್ರಹ್ಮರ‍್ಯ, ದಯೆ, ಕರುಣೆ, ದಾನ, ಶಿವಪೂಜೆ, ಪಂಚಾಕ್ಷರೀ ಮಂತ್ರಜಪ, ಶಿವಧ್ಯಾನ ಈ ರ‍್ಮಾಚರಣೆಯ ರಹಸೂತ್ರಗಳನ್ನು ತಿಳಿಸಿ ಮಾನವ ಕುಲದ ಬೆಳಕಾಗಿದ್ದಾರೆ. ಮನುಷ್ಯರಾದ ನಾವೆಲ್ಲರೂ ಜ.ರೇಣುಕಾಚರ‍್ಯರ ಸ್ಮರಣೆ ಮಾಡುವುದು ಅತ್ಯವಶ್ಯವಾಗಿದೆ ಎಂದರು.
ಶಿಕ್ಷಕರಾದ ಆರ್.ಡಿ. ಕಾಲಾಯಗರ, ಆರ್.ಡಿ. ಕಪ್ಪತ್ತನವರ, ಎಲ್.ತಿಪ್ಪನಾಯಕ್, ದೀಪಾ ಭೇಸ್ಮೆ. ನೇತ್ರಾ ಬದಾಮಿ ಸೇರಿದಂತೆ ವಿದ್ಯರ‍್ಥಿಗಳು ಇದ್ದರು. ಎಸ್.ಬಿ. ಅಣ್ಣಿಗೇರಿ ನರ‍್ವಹಿಸಿದರು. ಲಕ್ಷ್ಮೇಶ್ವರ ತಾಲೂಕಿನ ಎಲ್ಲ ರ‍್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ರೇಣುಕಾಚರ‍್ಯರ ಜಯಂತಿ ಆಚರಿಸಲಾಯಿತು.