ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಸವರಾಜ ಬೊಮ್ಮಾಯಿ ಅವರು ಮೊದಲ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ ಮಾಡಿದ ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಷ್ಯವೇತನ ಯೋಜನೆಗೆ ಸರ್ಕಾರ ನಿನ್ನೆ ಅಧಿಕೃತ ಆದೇಶ ಹೊರಡಿಸಿದೆ.
ಹೊಸ ಯೋಜನೆಯಂತೆ ಪಿಯುಸಿ, ಐಟಿಐ, ಡಿಪ್ಲೊಮಾ ಕಲಿಯುತ್ತಿರುವ ವಿದ್ಯಾರ್ಥಿ 2500, ವಿದ್ಯಾರ್ಥಿನಿಯರಿಗೆ 3000, ಬಿಎ, ಬಿಎಸ್ಸಿ, ಬಿಕಾಂ ಇತ್ಯಾದಿ ಪದವಿ ವ್ಯಾಸಂಗ ಮಾಡು ಪ್ರತಿ ವಿದ್ಯಾರ್ಥಿಗೆ 5000, ವಿದ್ಯಾರ್ಥಿನಿಗೆ 5500,
ಎಲ್ ಎಲ್ ಬಿ, ಪ್ಯಾರಾ ಮೆಡಿಕಲ್, ಬಿಫಾರ್ಮ, ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡುವವರಿಗೆ ಕ್ರಮವಾಗಿ 7500 ಹಾಗೂ 8000.
ಎಂಬಿಬಿಎಸ್, ಬಿಇ, ಬಿಟೆಕ್ ಹಾಗೂ ಸ್ನಾಕೋತ್ತರ ಕೋರ್ಸಗಳಿಗೆ 10000 ಹಾಗೂ 11000 ರೂ. ಶಿಷ್ಯವೇತನವನ್ನು ಸರ್ಕಾರ ಪಾವತಿಸಲಿದೆ.
ಈ ಶಿಷ್ಯ ವೇತನ ಪಡೆಯುವ ರೈತ ರಾಜ್ಯದ ಯಾವುದೇ ಮೂಲೆಯಲ್ಲಿ ಕೃಷಿ ಮಾಡುವ ಜಮೀನು ಹೊಂದಿರಬೇಕು. ದತ್ತು ಪುತ್ರರಿಗೂ ಅವಕಾಶ ಇದೆ. ಮಕ್ಕಳಿಗೆ ಪೋಷಕರಿಲ್ಲದಿದ್ದಲ್ಲಿ ಮಕ್ಕಳ ಹೆಸರಲ್ಲಿ ಜಮೀನು ಇದ್ದರೂ ಅರ್ಹರಾಗುತ್ತಾರೆ.
ರೈತ ಮಕ್ಕಳು ರಾಜ್ಯ ಸರ್ಕಾರದ ಪಾವತಿಸುವ ಯಾವುದೆ ಒಂದು ಶಿಷ್ಯವೇತನಕ್ಕೆ ಮಾತ್ರ ಅರ್ಹರಾಗಿರುತ್ತಾರೆ. ಆದರೆ, ರ‌್ಯಾಂಕ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರ‌್ಯಾಂಕ್ ಗಳಿಗೆ ಶಿಷ್ಯ ವೇತನ, ಪ್ರೋತ್ಸಾಹ ಧನ ಪಡೆದಿದ್ದರೂ ಶಿಷ್ಯವೇತನಕ್ಕೆ ಅರ್ಹರಾಗಿರುತ್ತಾರೆ.
ಶಿಷ್ಯವೇತನ ಯಾವುದೇ ಕೋರ್ಸಿನ ಸೆಮಿಸ್ಟರ್ ಅಥವಾ ಶೈಕ್ಷಣಿಕ ವರ್ಷಕ್ಕೆ ಮಿತಿಯಾಗಿರುತ್ತದೆ. ಅನುತ್ತೀರ್ಣ ಹೊಂದಿ ಪುನಃ ತೆಗೆದುಕೊಂಡರೆ ಅರ್ಹತೆ ಇಲ್ಲ. ಯಾವುದಾದರೂ ಒಂದು ಕೋರ್ಸಗೆ ಮಾತ್ರ ಮಕ್ಕಳು ಶಿಷ್ಯವೇತನ ಪಡೆಯಲು ಅರ್ಹರಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಿದೆ.