ವಿಜಯಸಾಕ್ಷಿ ಸುದ್ದಿ, ಗದಗ
ಸೋಂಕು ತಡೆಗಟ್ಟಲು ಸರಕಾರ ಲಾಕ್ ಡೌನ್ ಜಾರಿ ಮಾಡಿದೆ. ಗದಗ ಜಿಲ್ಲೆಯಲ್ಲೂ ಸೋಂಕು ಹೆಚ್ಚಳವಾಗದಂತೆ ಐದು ದಿನಗಳ ಕಾಲ ಜಿಲ್ಲಾಡಳಿತ ಸಂಪೂರ್ಣ ಲಾಕ್ ಡೌನ್ ಮಾಡಿದೆ.
ಅನಗತ್ಯ ವಾಹನಗಳ ಓಡಾಟ ಬೇಡ, ಬೇಕಾಬಿಟ್ಟಿ ವಾಹನ ಓಡಿಸಿದರೆ ಸೀಜ್ ಮಾಡುವ ಎಚ್ಚರಿಕೆ ಕೂಡ ನೀಡಲಾಗಿದೆ. ಆದರೂ ಕೆಲವು ಜನರು ಸುಖಾಸುಮ್ಮನೇ ಓಡಾಡೋದು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ವಾಹನ ತಡೆದಾಗ ವಾಹನ ಸವಾರರು ಇಲ್ಲದ ಸಬೂಬು ಹೇಳ್ತಾರೆ. ಪ್ರೆಸ್, ಮೆಡಿಯಾ, ಹಾಸ್ಪಿಟಲ್ ಗೆ ಬಂದಿದ್ದೆ, ಔಷಧ ತರಲು ಬಂದಿದ್ದೆ ಅಂತ ಹೇಳೊದು, ಪೊಲೀಸರು ಹೆಚ್ಚಿನ ರಿಸ್ಕ್ ತಗೊಳ್ಳದೇ ಬಿಟ್ಟು ಕಳಿಸುತ್ತಾರೆ. ಆದ್ರೆ ಇಲ್ಲೊಬ್ಬ ಭೂಪ ಬೈಕ್ ತಡೆದ ಪಿಎಸ್ಐಗೆ ಅಶ್ಲೀಲ ಭಾಷೆ ಬಳಸಿ ನಿಂಧಿಸಿದ್ದಾನೆ.
ಮೊನ್ನೆ ಗದಗನ ಹುಡ್ಕೋ ಕಾಲೋನಿಯ ಮೂರನೇ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಬೈಕ್ ತಡೆದ ನಂತರ ಆ ಯುವಕನಿಗೆ ಪೋನ್ ಕರೆ ಬಂದಿದೆ. ಆ ಸಂದರ್ಭದಲ್ಲಿ ಯುವಕ ಕರೆ ಮಾಡಿದ ವ್ಯಕ್ತಿಯ ಜೊತೆಗೆ ನನ್ನ ಗಾಡಿ …….ತಡಿಯೋ ಮಾರಾಯ….ಅಂತ ಪದೇ ಪದೇ ಹೇಳಿದ್ದಾನೆ. ಸೂಕ್ಷ್ಮವಾಗಿ ಗಮನಿಸಿದ ಆ ಲೇಡಿ ಪಿಎಸ್ಐ ಮೆಡಮ್ ಆ ಯುವಕನಿಗೆ ತರಾಟೆಗೆ ತಗೆದುಕೊಂಡಿದ್ದಲ್ಲದೆ ಬೈಕ್ ಸೀಜ್ ಮಾಡಿದ್ದಾರೆ. ಆದರೆ ಕೇವಲ ಬೈಕ್ ಸೀಜ್ ಮಾಡದೇ ಆತನ ಮೇಲೆ ಕೇಸ್ ಹಾಕಿ ಒದ್ದು ಒಳಗೆ ಹಾಕಿಬೇಕಿತ್ತು ಅಂತ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ಜೊತೆಗೆ ಅನುಚಿತವಾಗಿ ವರ್ತಿಸುವವರಿಗೆ ಪಾಠ ಕಲಿಸಿದಾಗ ಮಾತ್ರ ಸಮಾಜದಲ್ಲಿ ಇಂತಹವರಿಗೆ ಕಡಿವಾಣ ಹಾಕಬಹುದು ಅಂತಾರೆ ಪ್ರಜ್ಞಾವಂತ ಜನತೆ.
ಸೀಜ್ ಮಾಡಿದ ಮರುದಿನವೇ ಅಂದರೆ ಶನಿವಾರದಂದು ಬೈಕ್ ಬಿಡುಗಡೆಯಾಗಿದೆ. ಎಂತಹ ವಿಪರ್ಯಾಸ ನೋಡಿ.