ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಗದಗ-ಬೆಟಗೇರಿ ನಗರಸಭೆ ವಾರ್ಡ್ ನಂ. 4ರ ವಸಂತಸಿಂಗ ಜಮಾದಾರ ನಗರದ ಅಭಿವೃದ್ಧಿಗೆ ಆಗ್ರಹಿಸಿ ವಸಂತಸಿಂಗ ಜಮಾದಾರ ನಗರ ಅಭಿವೃದ್ದಿ ಹೋರಾಟ ಸಮಿತಿಯ ಅಧ್ಯಕ್ಷರಾದ ಹುಲ್ಲೇಶ ಎಚ್. ಭಜಂತ್ರಿ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳು ಹಾಗೂ ವಸತಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಹುಯಿಲಗೋಳ ರಸ್ತೆ ಬೆಟಗೇರಿಯಿಂದ 2 ಕಿ.ಮೀ. ದೂರದಲ್ಲಿ ವಸಂತಸಿಂಗ ಜಮಾದಾರ ನಗರವಿದ್ದು, ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ಹಾಗೂ ತಗಡಿನ ಶೆಡ್‌ಗಳಲ್ಲಿ ವಾಸಿಸುತ್ತಿದ್ದಾರೆ. ಹಕ್ಕುಪತ್ರಕ್ಕಾಗಿ ಮನವಿ ಸಲ್ಲಿಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ನಗರಸಭೆ ವತಿಯಿಂದ ವಿದ್ಯುತ್ ಹಾಗೂ ಶೌಚಾಲಯ ಸೌಲಭ್ಯಗಳನ್ನು ಮಾತ್ರ ಕಲ್ಪಿಸಿದ್ದಾರೆ. ಇಲ್ಲಿನ ಆಶ್ರಯ ಕಾಲೊನಿಯಲ್ಲಿ ಸುಮಾರು 200 ಪ್ಲಾಟ್‌ಗಳು ಖಾಲಿ ಇದ್ದು, ನಗರಸಭೆ ಅಥವಾ ಸರ್ಕಾರದ ವತಿಯಿಂದ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಮನೆ ಕಟ್ಟಿಕೊಡಬೇಕೆಂದು ಹುಲ್ಲೇಶ ಭಜಂತ್ರಿ ಮನವಿ ಮಾಡಿಕೊಂಡರು.
1995 ರಲ್ಲಿ ಇಂದಿರಾ ಹಾಗೂ ಡಾ. ಬಿ.ಆರ್. ಅಂಬೇಡ್ಕರ ಆವಾಸ ವಸತಿ ಯೋಜನೆ ಅಡಿಯಲ್ಲಿ ವಸಂತಸಿಂಗ ಜಮಾದಾರ ನಗರ ಆಶ್ರಯ ಕಾಲೋನಿಯನ್ನು ಸರ್ಕಾರ ನಿರ್ಮಿಸಿದೆ. ಈವರೆಗೂ ಗಟಾರು, ರಸ್ತೆ, ಬೀದಿದೀಪ, ಉದ್ಯಾನವನ, ಅಂಗನವಾಡಿ, ಶಾಲೆ, ಮುಂತಾದ ಸೌಲಭ್ಯಗಳನ್ನು ಒದಗಿಸಿಲ್ಲ. ನಮ್ಮ ಮನವಿಗೇ ಸರ್ಕಾರ ಇನ್ನು 45 ದಿನಗಳಲ್ಲಿ ಸ್ಪಂದಿಸದಿದ್ದರೆ ಡಿ. 15 ರಂದು ಬೆಟಗೇರಿ ವಸಂತಸಿಂಗ ಜಮಾದಾರ ನಗರ ಆಶ್ರಯ ಕಾಲೋನಿಯಿಂದ ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ತೆರಳಿ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹುಲ್ಲೇಶ ಎಚ್. ಭಜಂತ್ರಿ ಹಾಗೂ ರಾಮಣ್ಣ ಭಜಂತ್ರಿ ಮುಂಡರಗಿ ಎಚ್ಚರಿಸಿದರು.
ಭೀಮಣ್ನ ಪನ್ನೂರ, ವೀರನಗೌಡ, ಭೀಮಾಜಿ ಪಲ್ಲೂರ, ದೇವೇಂದ್ರಪ್ಪ ಮ್ಯಾಗೇಡಿ, ಫಕ್ಕೀರಪ್ಪ ಮಾಚಲ, ಬಸಪ್ಪ ಲಕ್ಕುಂಡಿ, ನಾಗರಾಜ ವಾಲ್ಮಿಕಿ, ಲಕ್ಷ್ಮಣ ಅಡಕಿ, ಯಲ್ಲಮ್ಮ ಬಾರಕೇರ, ಲಕ್ಷ್ಮವ್ವ, ಶೋಭಾ ಬಾಕಳೆ, ಬಸಣ್ಣ ಕೊತಂಬರಿ, ದಾನೇಶ ಹಿರೇಮಠ, ಸುಭಾಸ ಕದಡಿ ಉಪಸ್ಥಿತರಿದ್ದರು.
ವಸಂತಸಿಂಗ ಜಮಾದಾರ ನಗರ ಅಭಿವೃದ್ಧಿಗೆ ಮನವಿ
Advertisement