ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ವಾಹನ ವ್ಯವಸ್ಥೆ ಇಲ್ಲದೆ ಕತ್ತಲು ಹಾಗೂ ಮಳೆಯಲ್ಲಿ ನಡೆದು ಬರುತ್ತಿರುವದ‌್ನು ಕಂಡ ಮಾಧ್ಯಮ ಸ್ನೇಹಿತರಿಬ್ಬರು ಮಹಿಳೆಯರನ್ನು ಕಾರಿನಲ್ಲಿ ಹುಬ್ಬಳ್ಳಿಗೆ ಕರೆದುಕೊಂಡು ಬಂದು ತಮ್ಮ ಮನೆಗಳಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಖಾಸಗಿ ವಾಹಿನಿ ವರದಿಗಾರರಾದ ರಾಜು ದಖನಿ ಹಾಗೂ ಮಲ್ಲೇಶ ಸೂರಣಗಿ ಎಂಬುವವರೇ ಮಹಿಳೆಯರಿಗೆ ಸಹಾಯ ಮಾಡಿದ ಮಾಧ್ಯಮ ಸ್ನೇಹಿತರು.
ಕೆಲಸದ ನಿಮಿತ್ತ ಗದಗ ಜಿಲ್ಲೆಗೆ ಹೋಗಿ ಬರುವಾಗ ಮಹಿಳೆಯರು ಕತ್ತಲಲ್ಲಿ ಮಳೆಯಲ್ಲಿ ತೋಯ್ದುಕೊಂಡು ಹೋಗುತ್ತಿದ್ದರು. ಇದನ್ನು ನೋಡಿದ ಸ್ನೇಹಿತರು ವಿಚಾರಿಸಿದಾಗ ಹುಬ್ಬಳ್ಳಿಯಿಂದ ಆಟೋ ಮಾಡಿಕೊಂಡು ಹೆರಿಗೆಯಾದ ತಮ್ಮ ಸಂಬಂಧಿಯೊಬ್ಬರನ್ನು ಮಾತನಾಡಿಸಲು ಕೋಳಿವಾಡ ಗ್ರಾಮಕ್ಕೆ ಬಂದಿದ್ವಿರೀ ಆದ್ರ ಹೊಳ್ಳಿ ಹೋಗುವಾಗ ರಸ್ತೆದಾಗ ಆಟೋ ಕೆಟ್ಟು ನಿಂತು. ನಮಗ ದಿಕ್ಕ ದೋಜಲಿಲ್ಲರೀ. ನಡೆಕೊಂಡ ಮನೆ ಮುಟ್ಟಬೇಕು ಅಂತ ಹೊರಟೀವಿ ನೋಡ್ರೀ ಅಂದ್ರು.
ಆವಾಗ ಮಾಧ್ಯಮ ಸ್ನೇಹಿತರು ನೀವು ಎಲ್ಲಿಗೆ ಹೊರಟೀರಿ ಅಂದಾಗ ಹುಬ್ಬಳ್ಳಿಯ ಸಾಯಿನಗರಕ್ಕೆ ಹೋಗಬೇಕು ಅಂದ್ರು. ಆಯಿತು ನಾವು ಕರಕೊಂಡು ಹೊಕ್ಕೀವಿ ಅಂತ ತಮ್ಮ ಕಾರಿನಲ್ಲಿಯೇ ಅವರನ್ನು ಮನೆಯವರೆಗೂ ಮುಟ್ಟಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಇಬ್ಬರು ಮಾಧ್ಯಮ ಸ್ನೇಹಿತರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.