ವಿಜಯೇಂದ್ರ ಹಸ್ತಕ್ಷೇಪವೇ ಬಿಎಸ್ ವೈ ಪದತ್ಯಾಗಕ್ಕೆ ಕಾರಣ – ಹಳ್ಳಿ ಹಕ್ಕಿ!

0
Spread the love

ವಿಜಯಸಾಕ್ಷಿ ಸುದ್ದಿ, ಮೈಸೂರು

Advertisement

ರಾಜ್ಯದಲ್ಲಿ ಬಿಜೆಪಿ ಬಲಗೊಳ್ಳಲು ಸಿಎಂ ಯಡಿಯೂರಪ್ಪ ಅವರ ಶ್ರಮ ಸಾಕಷ್ಟಿದೆ. ಆದರೆ, ಸಿಎಂ ಹೇಳಿಕೆ ನಿರೀಕ್ಷಿತ. ಇದು ಬಹಳಷ್ಟು ದಿನಗಳ ಹಿಂದೆಯಿಂದಲೂ ನಡೆಯುತ್ತಿದೆ ಎಂದು ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ವಿಷಯವಾಗಿ ಸಿಎಂ ಹೇಳಿದ್ದು ದೊಡ್ಡ ಮಾತು. ಕಾಂಗ್ರೆಸ್ ಹಾಗೂ ಬಿಜೆಪಿಗೆ ದೆಹಲಿಯೇ ಹೈಕಮಾಂಡ್. ಅದಕ್ಕಾಗಿಯೇ ಬೊಮ್ಮಾಯಿ ಹಾಗೂ ವಿಜಯೇಂದ್ರ ದೆಹಲಿಗೆ ತೆರಳಿದ್ದರು ಎಂದು ಹೇಳಿದ್ದಾರೆ.

ನನಗೆ ಪರ್ಯಾಯ ನಾಯಕ ಇಲ್ಲ ಎಂಬುವುದು ಸುಳ್ಳು ಎಂಬ ಹೇಳಿಕೆ ಸ್ವಾಗತರ್ಹ. ರಾಜ್ಯದ ಆಡಳಿತ, ಜನರ, ಅಭಿವೃದ್ಧಿ ಹಿತದೃಷ್ಟಿಯಿಂದ ಹೈಕಮಾಂಡ್ ಮಾತಿಗೆ ಮೀರಲ್ಲ ಎಂಬ ಹೇಳಿಕೆ ಕೂಡ ಸ್ವಾಗತಿಸುವಂತದ್ದಾಗಿದೆ. ವಯಸ್ಸಿನ ಕಾರಣಕ್ಕೆ ಸಿಎಂ ಅವರನ್ನು ಬದಲಾಯಿಸಲಾಗುತ್ತಿದೆ. ಆರೆಸ್ಸೆಸ್ ಕೂಡ ಬಿಎಸ್ ವೈ ಅವರ ಮನವೊಲಿಸಿದೆ ಎಂದು ಹೇಳಿದ್ದಾರೆ.

ಬಿಜೆಪಿ ಪಕ್ಷವು ವಯಸ್ಸಿನ ಲಕ್ಷ್ಮಣ ರೇಖೆ ವಿಧಿಸಿಕೊಂಡಿದೆ. ಇದು ಅಡ್ವಾಣಿ, ಜೋಷಿ ಸೇರಿದಂತೆ ಎಲ್ಲರಿಗೂ ಅನ್ವಯ ಆಗಿದೆ. ಆದರೆ, ಯಡಿಯೂರಪ್ಪ ಅವರಿಗೆ ವಿಶೇಷ ಆದ್ಯತೆ ನೀಡಲಾಗಿತ್ತು. ಆದರೆ, ಪಕ್ಷವನ್ನ ಬಲಪಡಿಸುವ ಹಾಗೂ ಎಲ್ಲರನ್ನೂ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಅವರನ್ನು ಅದಕ್ಷ, ಅಪ್ರಾಮಾಣಿಕ ಎಂದು ಹೇಳುತ್ತಿದ್ದರು. ಆದರೆ, ನಾವೆಲ್ಲ ಬಿಎಸ್‌ವೈ ಮೇಲಿನ ವಿಶ್ಚಾಸಕ್ಕೆ‌ ಬಿಜೆಪಿಗೆ ಸೇರಿದ್ದೇವೆ. ಆದರೆ, ವಯಸ್ಸಿನ ಆಧಾರದ ಮೇಲೆ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ಹೈಕಮಾಂಡ್ ಸೂಚನೆ ಪಾಲಿಸುವುದು ನಾಯಕರ ಕರ್ತವ್ಯ ಎಂದು ಹೇಳಿದ್ದಾರೆ.

ರಾಜೀನಾಮೆ ಕೊಡುತ್ತಾರೆ, ಅವರು ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕಿಂತ ಹೈಕಮಾಂಡ್ ತೀರ್ಮಾನ ಮುಖ್ಯ. ಎಲ್ಲರನ್ನು ಪ್ರೀತಿಸುವ, ಒಟ್ಟಿಗೆ ಕೊಂಡೊಯ್ಯುವ ಸಾಮಾನ್ಯ ಜ್ಞಾನ ಇರುವವರೇ ಸಾಕು ರಾಜ್ಯವನ್ನು ಮುನ್ನಡೆಸಲು. ಕೈ, ಬಾಯಿ, ಶುದ್ದಿ ಇರುವವರು, ಬುದ್ದಿವಂತರು ಸಾಕು. ಒಂದೊಂದು ನಾಯಕತ್ವ ಕುಟುಂಬಗಳಿಂದಲೇ ಹೋಗಿವೆ. ಏನೇ ಆಗಲಿ, ವಿಜಯೇಂದ್ರ ಅವರ ಹಸ್ತಕ್ಷೇಪವೇ ಪದತ್ಯಾಗಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here