ವಿಜಯಸಾಕ್ಷಿ ಸುದ್ದಿ, ನರಗುಂದ
ವಿಶ್ವಕರ್ಮ ಜಯಂತಿ ಕೇವಲ ಸಾಮಾಜಿಕ ಕಾರ್ಯಕ್ರಮ ಮಾತ್ರವಲ್ಲ, ಧಾರ್ಮಿಕ ಕಾರ್ಯಕ್ರಮವೂ ಆಗಿದೆ ಎಂದು ತಾಲೂಕಿನ ಚಿಕ್ಕ ನರಗುಂದ ಗ್ರಾಪಂ ಅಧ್ಯಕ್ಷ ಮುತ್ತು ರಾಯರಡ್ಡಿ ಹೇಳಿದರು.
ಗ್ರಾಪಂ ವತಿಯಿಂದ ಸಭಾಭವನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಸ್ತ್ರ, ಸಾಧನ, ಸಲಕರಣೆಗಳು, ಒಡವೆಗಳು, ಶಿಲ್ಪಗಳು ಸೇರಿದಂತೆ ಈ ಜಗತ್ತಿಗೆ ಶಿವ, ವಿಷ್ಣು, ಇಂದ್ರ, ಮತ್ತಿತರ ದೇವರುಗಳಿಗೆ ಅಸ್ತ್ರ, ರಥಗಳನ್ನು ಮಾಡಿಕೊಟ್ಟು ದುಷ್ಟ ರಕ್ಕಸರ ವಧೆಗೆ ಕಾರಣರಾದ ವಿಶ್ವಕರ್ಮರ ಕೊಡುಗೆ ಅಪಾರವಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜದ ಯುವ ಸಮುದಾಯ ಹಾಗೂ ವಿಧ್ಯಾರ್ಥಿಗಳು ಪಾಲ್ಗೊಳ್ಳುವಿಕೆ ಹೆಚ್ಚಿಸಬೇಕು. ಸಮುದಾಯದ ಅಭಿವೃದ್ಧಿಗೆ ಮುಖಂಡರು ಸಂಘಟಿತವಾಗಿ ಶ್ರಮಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಲಕ್ಷ್ಮಣ ಕಂಬಳಿ, ಬಾಪುಗೌಡ ಹಿರೇಗೌಡ್ರ, ಶ್ರುತಿ ಬ್ಯಾಳಿ, ಪಿಡಿಓ ಶೈನಾಜ್ ಮುಜಾವರ, ಹಿರಿಯರಾದ ಅಡಿವೆಪ್ಪ ಮರಿಯಣ್ಣವರ, ಉಮೇಶ ಕೆಂಚನಗೌಡ್ರ, ಮಹೇಶ ಆರೆಬೆಂಚಿ, ಪಡಿಯಪ್ಪ ಬಾಚಿ, ರಮೇಶ ಪತ್ತಾರ, ಕಾಳಪ್ಪ ಬಡಿಗೇರ, ವಿನಾಯಕ ಬಡಿಗೇರ, ಪಂಚಾಯತಿ ಸಿಬ್ಬಂದಿ ಭಾಗವಹಿಸಿದ್ದರು.