ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಭಾರತ ತಂಡ ಪ್ರಕಟ!

0
Spread the love

ವಿಜಯಸಾಕ್ಷಿ ಸುದ್ದಿ, ಸೌತಾಂಪ್ಟನ್

Advertisement

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಾಳೆ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿದೆ. ಹೀಗಾಗಿ ಕಣಕ್ಕೆ ಇಳಿಯುವ 11 ಜನ ಆಟಗಾರರನ್ನು ಭಾರತ ತಂಡ ಪ್ರಕಟಿಸಿದೆ.

ಜೂ. 18ರ ಬೆಳಿಗ್ಗೆ ಸೌತಾಂಪ್ಟನ್‌ ನಲ್ಲಿ ಉಭಯ ತಂಡಗಳು ಕಾದಾಟ ಪ್ರಾರಂಭಿಸಲಿವೆ. ಭಾರತ ತಂಡವು ಮೂವರು ವೇಗದ ಬೌಲರ್ ಹಾಗೂ ಇಬ್ಬರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಂಡಿದೆ. ಇದರೊಂದಿಗೆ 6 ಜನ ಬ್ಯಾಟ್ಸಮನ್ ಗಳು ತಂಡದಲ್ಲಿ ಇರಲಿದ್ದಾರೆ. ವಿಕೆಟ್ ಕೀಪರ್ ಆಗಿ ರಿಷಬ್ ಪಂತ್ ಇರಲಿದ್ದಾರೆ. ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಕಣಕ್ಕೆ ಇಳಿಯಲಿದ್ದಾರೆ.

ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರೊಂದಗೆ 6 ಬ್ಯಾಟ್ಸಮನ್ ಗಳು ಕಣದಲ್ಲಿ ಇರಲಿದ್ದಾರೆ. ಈ ಐದು ಬೌಲರ್ ಗಳು ಕಳೆದ ಕೆಲವು ವರ್ಷಗಳಿಂದಲೂ ಭಾರತೀಯ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ.
ಸೌತಾಂಪ್ಟನ್ ಪಿಚ್ ಸ್ಪಿನ್ ಬೌಲಿಂಗ್ ಗೆ ಸಹಾಯ ಮಾಡುವ ಸಾಧ್ಯತೆಯಿಂದಾಗಿ ಭಾರತವು ಅಶ್ವಿನ್ ಮತ್ತು ಜಡೇಜಾ ಇಬ್ಬರಿಗೂ ಅವಕಾಶ ನೀಡಿದೆ. ಭಾರತವು ಈ ಮೈದಾನದಲ್ಲಿ ಇದುವರೆಗೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಿ, ಎರಡು ಬಾರಿಯೂ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ.

ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯಾ ರಹಾನೆ(ಉಪನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ರಿಷಭ್ ಪಂತ್, ಆರ್.ಅಶ್ವಿನ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ನಾಳೆ ಕಣಕ್ಕೆ ಇಳಿಯಲಿದ್ದಾರೆ. ಭಾರತ ತಂಡ ಫೈನಲ್ ಪಂದ್ಯಕ್ಕಾಗಿ ಅಂತಿಮ 15 ಆಟಗಾರರನ್ನು ಘೋಷಣೆ ಮಾಡಿತ್ತು.

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್ ಪಂದ್ಯವು ಜೂ. 18ರಂದು ಮಧ್ಯಾಹ್ನ 3ಕ್ಕೆ ನಡೆಯಲಿದೆ. ಟಾಸ್ ಸಮಯದಲ್ಲಿ ಕಿವಿ ತಂಡವು ತನ್ನ ಆಡುವ ಇಲೆವೆನ್ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಪಂದ್ಯ ಗೆಲ್ಲುವ ತಂಡವು ಟೆಸ್ಟ್ ನಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡವಾಗಲಿದೆ. ಅಲ್ಲದೇ, ಐಸಿಸಿ ಟೆಸ್ಟ್ ಮೇಸ್ ಅನ್ನು ಟ್ರೋಫಿಯಾಗಿ ಪಡೆಯಲಿದೆ.


Spread the love

LEAVE A REPLY

Please enter your comment!
Please enter your name here