ವಿಜಯಸಾಕ್ಷಿ ಸುದ್ದಿ, ಗದಗ: ಎನರ್ಜಿ ಅಥವಾ ಶಕ್ತಿಯನ್ನು ಯಾವುದೇ ಆರ್ಥಿಕ ಬೆಳವಣಿಗೆಯ ಹಾಗೂ ಮಾನವ ಅಭಿವೃದ್ಧಿಯ ಪ್ರಮುಖ ಅಂಶವಾಗಿ ಗುರುತಿಸಲಾಗಿದೆ. ದೇಶದ ಮೂಲಭೂತ ಅಭಿವೃದ್ಧಿ ಗುರಿಗಳಲ್ಲೊಂದಾಗಿ ಸಾಮಾನ್ಯ ಶಕ್ತಿ ಪ್ರವೇಶ ಹಾಗೂ ಶಕ್ತಿಯ ಭದ್ರತೆಯನ್ನು ಪರಿಗಣಿಸಿ, ಭಾರತ ಸರ್ಕಾರವು ಕಾರ್ಬನ್ ಉತ್ಸವದಲ್ಲಿ ಕನಿಷ್ಠ ಏರಿಕೆಯನ್ನು ಖಚಿತಪಡಿಸಿಕೊಳ್ಳುತ್ತಾ ಹೆಚ್ಚುತ್ತಿರುವ ಶಕ್ತಿ ಅವಶ್ಯಕತೆಗಳಿಗೆ ತಕ್ಕಂತೆ ಕೈಗೊಳ್ಳಲು ಬಹುಮುಖ ದೃಷ್ಠಿಕೋನವನ್ನು ಅನುಸರಿಸಿದೆ ಎಂದು ಪ್ರಾಂಶುಪಾಲ ಡಾ. ಎಮ್.ಎಮ್. ಅವಟಿ ನುಡಿದರು.
ನಗರದ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ಸರಕಾರದ ನವಿಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಮತ್ತು ಬ್ಯುರೋ ಆಫ್ ಎನರ್ಜಿ ಎಫಿಷಿಯನ್ಸಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ `ರಾಷ್ಟ್ರೀಯ ಶಕ್ತಿ ಸಂರಕ್ಷಣಾ ಸಪ್ತಾಹ-2024′ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ದಿನಾಚರಣೆಯ ಅಡಿಯಲ್ಲಿ ವಿವಿಧ ಕಾರ್ಯಕ್ರಗಳನ್ನು ಪ್ರೊ. ಸಂತೋಷಕುಮಾರ್ ಜಿ.ಎಂ. ಮತ್ತು ಜಗದೀಶ ಶಿವನಗುತ್ತಿ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ `ಶಕ್ತಿ ಸಂರಕ್ಷಣೆಯಲ್ಲಿ ನಮ್ಮ ಪಾತ್ರ’ ಎಂಬ ವಿಷಯದ ಮೇಲೆ ರಸಪ್ರಶ್ನೆ ಸ್ಪರ್ಧೆ, ಶಕ್ತಿಯ ಪ್ರಾಮುಖ್ಯತೆಯನ್ನು ಚಿತ್ರಿಸಲು ಪೊಸ್ಟರ್ ವಿನ್ಯಾಸ ಸ್ಪರ್ಧೆ, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ನಡುವೆ ಶಕ್ತಿ ಉಳಿತಾಯ ಸಂಬಂಧಿತ ತಂತ್ರಜ್ಞಾನಗಳು, ನವೀಕರಣ ಶಕ್ತಿಯ ಬಳಕೆ ಮತ್ತು ದೈನಂದಿನ ಜೀವನದಲ್ಲಿ ಶಕ್ತಿ ಸಂರಕ್ಷಣೆ ಕುರಿತಾಗಿ ಸಂವಾದ ನಡೆಯಿತು.
ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಶಕ್ತಿ ಸಂರಕ್ಷಣೆಗಾಗಿ ಶಪಥ ಸ್ವೀಕರಿಸಿದರು. ವಿದ್ಯಾರ್ಥಿಗಳಾದ ಸಾಧನಾ, ವಿಜಯಲಕ್ಷ್ಮೀ, ಅನಿಕಾಸಾರಿಕಾ, ಸಾಗರ, ದರ್ಶನ ಮತ್ತು ಮೊಹಮ್ಮದ ಇತರರು ಕಾರ್ಯಕ್ರಮ ಸಂಯೋಜಿಸಿ, ಶಕ್ತಿ ಸಂರಕ್ಷಣಾ ಜಾಥಾ ಏರ್ಪಡಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರೊ. ಗೌತಮ ರೇವಣಕರ, ಪ್ರೊ. ದಯಾನಂದ ಗೌಡರ, ಪ್ರೊ. ಲೋಕೇಶ, ಪ್ರೊ. ರಮೇಶ ಬಡಿಗೇರ, ಪ್ರೊ. ಆರ್.ವಿ. ಕಡಿ, ಪ್ರೊ. ಐ.ಎಸ್. ಪಾಟೀಲ, ಪ್ರೊ. ಅಶ್ವಿನಿ ಅರಳಿ, ಪ್ರೊ. ಶೈಲಜಾ ಮುದೇನಗುಡಿ, ಪ್ರೊ. ಲೋಹಿತ್, ಪ್ರೊ. ಪ್ರಸನ್ನ ನಾಡಗೌಡ, ಪ್ರೊ. ಸುನಿಲ ಪಾಟೀಲ, ಪ್ರೊ. ಮಧು, ಪ್ರೊ. ವೀರೇಶ ಮಾಗಳದ, ಪ್ರೊ. ವಿಜಯಕುಮಾರ ಮಾಲಗಿತ್ತಿ, ಪ್ರೊ. ಮಹಾಂತ ಕಟ್ಟಿಮನಿ, ಪ್ರೊ. ಬಸವರಾಜ ಪಾಟೀಲ ಸೇರಿದಂತೆ ಶಿಕ್ಷಕರು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಎಲೆಕ್ಟ್ರಿಕಲ್ ಮುಖ್ಯಸ್ಥ ಡಾ. ಈರಣ್ಣ ಕೋರಚಗಾಂವ ಶಕ್ತಿ ಸಂರಕ್ಷಣೆಯ ಆವಶ್ಯಕತೆಯನ್ನು ಮತ್ತು ಚಿಕ್ಕ ಚಿಕ್ಕ ಕ್ರಮಗಳ ಮೂಲಕ ನಾವು ಶಕ್ತಿ ಉಳಿತಾಯಕ್ಕೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ವಿವರಿಸಿದರು.