- ನಕಲಿ ಫೇಸ್ ಬುಕ್ ಖಾತೆ ಸೃಷ್ಟಿ ಸ್ನೇಹಿತರ ಬಳಿ ಹಣಕ್ಕೆ ಬೇಡಿಕೆ
- ಮೋಸ ಹೋಗದಂತೆ ಅಭಿಮಾನಿಗಳು, ಕಾರ್ಯಕರ್ತರಲ್ಲಿ ಶಾಸಕರ ಮನವಿ
ವಿಜಯಸಾಕ್ಷಿ ಸುದ್ದಿ, ಗದಗ
Advertisement
ಪ್ರಭಾವಿಗಳು, ರಾಜಕಾರಣಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಹಣ ವಸೂಲಿ ದಂಧೆ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಲಿವೆ. ಇಂತದೆ ಒಂದು ಪ್ರಕರಣ ಗದಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿರುವ ಖದೀಮರು, ಅವರ ಸ್ನೇಹಿತರಿಗೆ ಮೆಸೆಂಜರ್ ಮೂಲಕ ಹತ್ತು ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಸಂಶಯಗೊಂಡ ಕೆಲ ಸ್ನೇಹಿತರು ಸಂಕನೂರ ಅವರ ಗಮನಕ್ಕೆ ತಂದಿದ್ದು, ವಿಷಯ ತಿಳಿದು ಶಾಕ್ ಗೊಂಡ ಶಾಸಕರು ತಮ್ಮ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಯಾಗಿರುವ ಕುರಿತು ತಿಳಿಸಿ, ಕಾರ್ಯಕರ್ತರು, ಅಭಿಮಾನಿಗಳು ಮೋಸ ಹೋಗದಂತೆ ಫೇಸ್ ಬುಕ್ ಮೂಲಕ ಮನವಿ ಮಾಡಿದ್ದಾರೆ.