ವಿಜಯಸಾಕ್ಷಿ ಸುದ್ದಿ, ಗದಗ
ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಇದೆ. ಅಗತ್ಯ ವಸ್ತುಗಳ ಮಾರಾಟ ಹಾಗೂ ಖರೀದಿಗಾಗಿ ಬೆಳಿಗ್ಗೆ ಆರು ಗಂಟೆಯಿಂದ ನಾಲ್ಕು ಗಂಟೆಗಳ ಕಾಲ ಅವಕಾಶ ಕಲ್ಪಿಸಲಾಗಿದೆ.
ಕೋವಿಡ್ ನಿಯಮಾವಳಿ ಪಾಲಿಸಿ ವ್ಯಾಪಾರ, ವಹಿವಾಟು ನಡೆಸಬೇಕಿದ್ದ ತರಕಾರಿ ವ್ಯಾಪಾರಿಗಳು, ಹಾಗೂ ಜನರು ಮುಗಿಬಿದ್ದಿದ್ದಾರೆ.

ಜಿಲ್ಲೆಯ ಶಿರಹಟ್ಟಿ ಪಟ್ಟಣದ ಪುರಸಭೆಯ ಕೂಗಳತೆಯಲ್ಲಿ ಇರುವ ಸರಕಾರಿ ಶಾಲೆಯ ಆವರಣದಲ್ಲಿ ಜನಜಾತ್ರೆಯೇ ಸೇರಿದೆ. ಬೆಳ್ಳಂಬೆಳಿಗ್ಗೆ ಆರಂಭಗೊಂಡ ತರಕಾರಿ ವ್ಯಾಪಾರ ಒಂಬತ್ತು ಗಂಟೆಯಾದರೂ ಜೋರಾಗಿತ್ತು. ಸಾಮಾಜಿಕ ಅಂತರ, ಕೆಲ ಜನರು ಮಾಸ್ಕ್ ಹಾಕದೇ ತರಕಾರಿ ಕೊಳ್ಳುವುದರಲ್ಲಿ ಬ್ಯುಸಿ ಆಗಿದ್ದರು.

ಆದರೆ ಇದನ್ನೆಲ್ಲಾ ತಡೆಯಬೇಕಾದ ಅಧಿಕಾರಿಗಳು ಮಾತ್ರ ಇತ್ತ ಸುಳಿದಿರಲಿಲ್ಲ ಎಂದು ಬೀದಿ ಬದಿ ವ್ಯಾಪಾರಸ್ಥರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಾಬುಸಾಬ ಲಕ್ಷ್ಮೇಶ್ವರ ಹಾಗೂ ತಾಲೂಕು ಅಧ್ಯಕ್ಷ ಶಬ್ಬೀರ ನಗಾರಿ, ಕಾರ್ಯದರ್ಶಿ ಆನಂದ ಕೋಳಿ, ಉಪಾಧ್ಯಕ್ಷ ಮಹಮ್ಮದ್ ರಫೀಕ ಛಬ್ಬಿ, ಹಿರಿಯರಾದ ನಿಂಗಪ್ಪ ತಳವಾರ ಆರೋಪಿಸಿದ್ದಾರೆ.