ವಿಜಯಸಾಕ್ಷಿ ಸುದ್ದಿ, ಗದಗ
ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಅವರ ತವರು ಗ್ರಾಮ ಸೇರಿದಂತೆ ಕ್ಷೇತ್ರದಲ್ಲೀಗ ಅಂದರ್- ಬಾಹರ್ ಜೂಜಾಟ ಜೋರಾಗಿದೆ. ಅದರಲ್ಲೂ ಇತ್ತೀಚೆಗೆ ಲಕ್ಷ್ಮೇಶ್ವರ ತಾಲೂಕಿನಲ್ಲಂತೂ ಜೂಜಾಟದ ಹಾವಳಿ ಮಿತಿಮೀರಿದೆ.
ಕುಂದ್ರಳ್ಳಿ ತಾಂಡಾ, ಕೆರಳ್ಳಿ ತಾಂಡಾ ಸಹಿತ ಮೂರು ಕಡೆ ನಡೆದ ಪ್ರತ್ಯೇಕ ದಾಳಿಯಲ್ಲಿ ಒಟ್ಟು 19 ಜನ ಜೂಜುಕೊರರನ್ನು ಪೊಲೀಸರು ಬಂಧಿಸಿ, 46 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಕುಂದ್ರಳ್ಳಿ ತಾಂಡಾದ ಮಹಿಳೆಯೊಬ್ಬರ ಮನೆಯ ಹಿಂಬಾಗದಲ್ಲಿ ಜೂಜಾಡುತ್ತಿದ್ದ ಕುಂದಗೋಳದ ದೇಶಮಂಡೆಯವರ ಓಣಿಯ ಲತೀಫಸಾಬ್ ದಾವಲಸಾಬ್ ತಿಪ್ಪಿಮನಿ, ಆದ್ರಳ್ಳಿ ತಾಂಡಾದ ಮಹಾದೇವ ಮೊನ್ನಪ್ಪ ಲಮಾಣಿ, ಗದಗ ತಾಲೂಕಿನ ಚಿಂಚಲಿಯ ಕುಮಾರ್ ಕೃಷ್ಣಪ್ಪ ಬಂಡಿವಡ್ಡರ್, ಆದ್ರಳ್ಳಿ ತಾಂಡಾದ ಕಾಶಪ್ಪ ಲಮಾಣಿ ಎಂಬುವವರನ್ನು ಬಂಧಿಸಿ, ಅವರಿಂದ 8,700 ನಗದು ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಪಕ್ಕದ ಕೆರಳ್ಳಿ ತಾಂಡಾದ ಮಹಿಳೆಯೊಬ್ಬರ ಮನೆಯ ಹಿತ್ತಲ ಜಾಗೆಯಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪದ ಹನುಮಂತ ಫಕ್ಕೀರಪ್ಪ ಹೊಸೂರು, ಕೆರಳ್ಳಿ ತಾಂಡಾದ ಪ್ರಭು ರೇಖಪ್ಪ ಲಮಾಣಿ, ಚಂದ್ರು ಲಮಾಣಿ, ಮಾರುತಿ ಲಮಾಣಿ, ಶಿರಹಟ್ಟಿ ತಾಲೂಕಿನ ತಾರಿಕೊಪ್ಪದ ವಿಶಾಲರೆಡ್ಡಿ ಮೇಲಗಿರಿಯಪ್ಪ ಮರುನಬಿಡಾ, ಗದಗ-ಬೆಟಗೇರಿಯ ಹೆಲ್ತ್ ಕ್ಯಾಂಪ್ ನಿವಾಸಿ ಏಕನಾಥ್ ಭೀಮಪ್ಪ ವಡ್ಡರ್ ಕಲ್ಲು, ಫಾರೂಕ್, ಮುಂಡರಗಿ ತಾಲೂಕಿನ ನಾಗರಳ್ಳಿಯ ಮಾರುತಿ ಮರಿಯಪ್ಪ ಯಲಿಕಾರ ಎಂಬುವವರನ್ನು ಬಂಧಿಸಿ, ಅವರಿಂದ 21 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.
ಶುಕ್ರವಾರ ಸಂಜೆ ನಡೆದ ಮತ್ತೊಂದು ಪ್ರಕರಣದಲ್ಲಿ ಸರಕಾರಿ ಹಳ್ಳದಲ್ಲಿ ಜೂಜಾಟದಲ್ಲಿ ತೊಡಗಿದ್ದ ವ್ಯಾಪಾರಸ್ಥರು, ವಿದ್ಯಾರ್ಥಿ ಸೇರಿದಂತೆ 7 ಜನರ ಬಂಧಿಸಲಾಗಿದೆ.
ಹನಮಂತ ನೀಲಪ್ಪ ಶೆರಸೂರಿ, ಗಿರೀಶ್ ಶಿವಯ್ಯ ಕಲ್ಮಠ, ಬಸವರಾಜ್ ಕಳಕಪ್ಪ ಉಮಚಗಿ, ಮನೋಜ್ ಮಂಜುನಾಥ್ ತೆಗ್ಗಿನಮನಿ, ಮಹ್ಮದ್ ಅಲಿ ಗೌಸಸಾಬ್ ಕಲಬುರಗಿ, ಮಂಜುನಾಥ್ ಶಾಂತನಗೌಡ್ ಪಾಟೀಲ, ಗದಗನ ಗಂಗಾಪೂರಪೇಟಿಯ ಮನೋಜ್ ಮಲ್ಲಿಕಾರ್ಜುನ ಮೆಣಸಿನಕಾಯಿ ಎಂಬುವವರನ್ನು ಬಂಧಿಸಿಲಾಗಿದೆ. ಬಂಧಿತರಿಂದ 16,200 ಸಾವಿರ ವಶಪಡಿಸಿಕೊಳ್ಳಲಾಗಿದೆ.
ಈ ಕುರಿತಂತೆ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.