ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ವಿ ಸಂಕನೂರ ಪರ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.
ಬುಧವಾರ ಬೆಟಗೇರಿಯ ಮೋಹನ್ ಹೊನ್ನಳ್ಳಿ ಅವರ ಮನೆಯಲ್ಲಿ ಪ್ರಚಾರ ಸಭೆ ನಡೆಸಿದ ಅನಿಲ್ ಮೆಣಸಿನಕಾಯಿ, ಎಸ್ ವಿ ಸಂಕನೂರ ಅವರ ಗೆಲುವಿಗೆ ಶ್ರಮಿಸಬೇಕೆಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಅನಿಲ್ ಮೆಣಸಿನಕಾಯಿ, ಸಂಕನೂರ ಅವರ ಗೆಲುವಿನಲ್ಲಿ ವಾರ್ಡ್ ಪ್ರಮುಖರ ಪಾತ್ರ ಅಪಾರವಾಗಿದೆ. ಪದವೀಧರ ಮತದಾರರ ಮನೆಮನೆಗೆ ತೆರಳಿ ಬಿಜೆಪಿ ಸರ್ಕಾರದ ಜೊತೆಗೆ ಸಂಕನೂರ ಅವರ ವೈಯಕ್ತಿಕ ಸಾಧನೆ ಮತ್ತು ಸೇವೆಯನ್ನು ತಿಳಿಸಿ, ಮತ ನೀಡುವಂತೆ ಮನವೊಲಿಸಬೇಕು. ಪದವೀಧರ ಮತದಾರರ ಪಟ್ಟಿ ಅಂತಿಮವಾಗಿದ್ದು, ಆ ಪಟ್ಟಿಯಲ್ಲಿರುವ ಮತದಾರರ ಸಂಪೂರ್ಣ ಮಾಹಿತಿ ಪಡೆಯಬೇಕು ಎಂದರು.
ಪ್ರಚಾರ ಸಭೆ ನಂತರ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಚುನಾವಣೆ ತಯಾರಿ, ಪಕ್ಷ ಸಂಘಟನೆ ಕುರಿತು ಸಂಪೂರ್ಣ ಮಾಹಿತಿ ಪಡೆದರು. ಯಾವುದೇ ಕಾರಣಕ್ಕೂ ಮೈಮರೆಯದೇ ಪಶ್ಚಿಮ ಪದವೀಧರ ಕ್ಷೇತ್ರ ಕೈ ತಪ್ಪದಂತೆ ನೋಡಿಕೊಳ್ಳಬೇಕೆಂದು ಮುಖಂಡರು ಹಾಗೂ ನೆರೆದಿದ್ದ ಕಾರ್ಯಕರ್ತರಿಗೆ ವಿನಂತಿಸಿದರು.
ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಕಾಂತಿಲಾಲ್ ಬನ್ಸಾಲಿ, ಶಹರ ಅಧ್ಯಕ್ಷ ಮಹಾಂತೇಶ್ ನಾಲ್ವಾಡ, ಡಿ ಜಿ ಕೊಳ್ಳಿ, ಈಶಣ್ಣ ಮುನವಳ್ಳಿ, ಮಂಜುನಾಥ್ ಮ್ಯಾಗೇರಿ, ರಾಘವೇಂದ್ರ ಯಳವತ್ತಿ, ಅರವಿಂದ ಹುಲ್ಲೂರ, ವೆಂಕಟೇಶ್ ಬಳ್ಳಾರಿ, ಶ್ರೀನಿವಾಸ್ ಹುಬ್ಬಳ್ಳಿ, ರಾಘು ಶ್ಯಾವಿ, ಹನುಮಂತಪ್ಪ ಅಳವಂಡಿ, ಸುಧೀರ್ ಕಾಟಿಗೇರ್, ಮಂಜುನಾಥ್ ತಳವಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಂಕನೂರ ಪರ ಅನಿಲ್ ಮೆಣಸಿನಕಾಯಿ ಪ್ರಚಾರ
Advertisement