ಸಂಸದ ಕರಡಿ ಸಂಗಣ್ಣ ಉಡಾಫೆ ಹೇಳಿಕೆ ಖಂಡನೀಯ: ಹಿಟ್ನಾಳ

0
Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

Advertisement

ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯ ಸಂಗಣ್ಣ ಕರಡಿ ಅವರು ಇತ್ತೀಚೆಗೆ ಒಂದು ಹೇಳಿಕೆ ನೀಡಿದ್ದನ್ನು ತಾವು ಗಮನಿಸಿರಬಹುದು , ತೈಲ ಹಾಗೂ ಅಡುಗೆ ಅನಿಲ ಬೆಲೆ ಏರಿಕೆಗೆ ಸಂಬಂಧಿಸಿದಂತೆ , ‘ ಅಪ್ಪನ ಸಾಲವನ್ನು ಮಗ ತೀರಿಸಬೇಕಲ್ವೆ ? ‘ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ. ಇದು ಖಂಡನೀಯ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆಗೆ ಹಿಂದಿನ ಯುಪಿಎ ಸರಕಾರವೇ ಕಾರಣ ಎಂದು ಸಂಸದರು ಆರೋಪಿಸಿದ್ದಾರೆ . ಜನರು ಬೆಲೆ ಏರಿಕೆ ಭಾರದಲ್ಲಿ ನಲುಗಿ ಹೋಗುತ್ತಿರುವಾಗ , ಸಂಸದರ ಈ ಹೇಳಿಕೆ ಆಘಾತಕಾರಿಯಷ್ಟೇ ಅಲ್ಲ , ಸಾಕಷ್ಟು ತಪ್ಪು ಮಾಹಿತಿಯನ್ನು ಒಳಗೊಂಡಿದೆ ಎಂದು ಸಂಸದರ ಹೇಳಿಕೆಯನ್ನು ಖಂಡಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ 2014 ರ ಮಾರ್ಚ್‌ವರೆಗೆ ತನ್ನ 67 ವರ್ಷಗಳ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ನೇತೃತ್ವದ ಸರಕಾರಗಳು ಮಾಡಿದ ಒಟ್ಟು ಸಾಲ ರೂ .53.11 ಲಕ್ಷ ಕೋಟಿ , ಆದರೆ , ಜೂನ್ 2014 ರಿಂದ 2021 ರವರೆಗೆ ಬಿಜೆಪಿ ಸರಕಾರ ಮಾಡಿರುವ ಒಟ್ಟು ಸಾಲ 82.7 ಲಕ್ಷ ಕೋಟಿಗಳು . ಈ ಎರಡೂ ಪಕ್ಷಗಳ ನೇತೃತ್ವದ ಸರಕಾರ ಮಾಡಿರುವ ಒಟ್ಟು ಸಾಲ ರೂ .135.87 ಲಕ್ಷ ಕೋಟಿ ಅಗುತ್ತದೆ‌. ಬಿಜೆಪಿ ಸರಕಾರ ತಾನು ಮಾಡಿರುವ ಅಪಾರ ಸಾಲದ ಜೊತೆಗೆ , ಅದಾನಿ ಮುಂತಾದ ಕಾರ್ಪೊರೇಟ್ ಸಂಸ್ಥೆಗಳ ಅಂದಾಜು ರೂ .11 ಲಕ್ಷ ಕೋಟಿ ಸಾಲವನ್ನು ಎನ್‌ಪಿಎ ( ವಸೂಲಾಗದ ಸಾಲ – ಅನುತ್ಪಾದಕ ಸಾಲ ) ಎಂದು ಘೋಷಿಸಿದೆ . ಅಂದರೆ , ಕಾರ್ಪೊರೇಟ್ ಸಂಸ್ಥೆಗಳ ಈ ರೂ .11 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದಂತೆ . ಇದರ ಜೊತೆಗೆ ಕಳೆದ ನಾಲ್ಕು ವರ್ಷಗಳಲ್ಲಿ ರೂ .7 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತವನ್ನು ಮನ್ನಾ ( ಲೈಟ್ ಆಫ್ ಮಾಡಿದೆ 3.ಅನುತ್ಪಾದಕ ಸಾಲ ಪದ ಇಪಿ ನರಕಾರ ಘೋಷಿಸಿರುವ ರೂ . 11 ಲಕ್ಷ ಕೋಟಿ ಮೊತ್ತದಲ್ಲಿ ಪ್ರಧಾನಿ ಆಗಿ ಅವರ ಪರಮಾಪ್ತ ಉದ್ಯಮಿ ಅದಾನಿಯ ಸಾಲದ ಪ್ರಮಾಣವೇ ರೂ .4.5 ಲಕ್ಷ ಕೋಟಿಯಷ್ಟಿದೆ ಎಂದು ಬಿಜೆಪಿಯವರೇ ಆಗಿರುವ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ . ಇಷ್ಟೊಂದು ಸಾಲ ಮಾಡಿದ್ದರೂ ಅದಾನಿ ಅವರ ಆದಾಯ 2016 ರಿಂದ ಗುಣವಾಗುತ್ತಿರುವುದು ಹೇಗೆ ? ಇಷ್ಟೊಂದು ಸಾಲ ಇರುವ ವ್ಯಕ್ತಿಯ ಸಾಲವನ್ನು ಮನ್ನಾ ಮಾಡಿದ್ದಾದರೂ ಏಕೆ? ಈ ಅಂಶ ಸನ್ಮಾನ್ಯ ಸಂಸದ ಸಂಗಣ್ಣ ಕರಡಿ ಅವರಿಗೆ ಗೊತ್ತಿಲ್ಲವೆ? ಎಂದು ಹಿಟ್ನಾಳ ಪ್ರಶ್ನಿಸಿದರು.

2013-14ರಲ್ಲಿ ಭಾರತದ ರಷ್ಟು ಆದಾಯ ರೂ .25.52 ಲಕ್ಷ ಕೋಟಿ ಇದ್ದದ್ದು ಮೋದಿ ಕಾಲದ 2019-2020ರ ವೇಳೆಗೆ ರೂ .23.02 ಲಕ್ಷ ಕೋಟಿಗೆ ಇಳಿದಿದೆ . ಹಾಗಾದರೆ ” ಮೇಕ್ ಇನ್ ಇಂಡಿಯಾ ” ಎಲ್ಲಿ ಹೋಯ್ತು? ದೇಶದ ಜನ ಕಳೆದ 70 ವರ್ಷಗಳಲ್ಲಿ ಸೃಷ್ಟಿಸಿದ 6 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡುತ್ತಿರುವ ಮೋದಿಯವರು ಈ ದೇಶದ ಜನರ ಅನುಮತಿ , ಒಪ್ಪಿಗೆ ಪಡೆದಿದ್ದಾರಾ ? ಅಸ್ತಿ ನಗದೀಕರಣ ಹೆಸರಿನಲ್ಲಿ ಭಾರತದ ರಸ್ತೆಗಳು , ಏರ್‌ಪೋರ್ಟ್‌ಗಳು , ರೈಲು ನಿಲ್ದಾಣಗಳು ಸೇರಿ ಪ್ರತಿಯೊಂದನ್ನೂ ಖಾಸಗಿಯವರಿಗೆ ಒಪ್ಪಿಸಲಾಗುತ್ತಿದೆ . ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಮೋದಿ ಅವರು ಮಾರಾಟ ಮಾಡುತ್ತಿರುವುದು ಯಾರು ಮಾಡಿಟ್ಟ ಆಸ್ತಿಯನ್ನು ? ಇದಕ್ಕೆ ಸಂಸದ ಸಂಗಣ್ಣ ಕರಡಿ ಏನು ಹೇಳುತ್ತಾರೆ? ಎಂದು ಶಾಸಕರು ಕಿಡಿ ಕಾರಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ಮನೆಗಳ ಆಸ್ತಿ ತೆರಿಗೆ ವಿಪರೀತ ಹೆಚ್ಚಾಗಿರುವುದು ಮಾತ್ರವಲ್ಲದೆ ಖಾಲಿ ಜಾಗಗಳಿಗೂ ತೆರಿಗೆ ವಿಧಿಸುತ್ತಿದ್ದಾರೆ . ಕಬ್ಬಿಣ , ಸಿಮೆಂಟ್ ಸೇರಿ ದಿನನಿತ್ಯ ಬಳಕೆಯ ಎಲ್ಲಾ ಸ್ಥಳ ಬೆಲೆಯೂ ಆಕಾಶ ಮುಟ್ಟುತ್ತಿದೆ . ಅಚ್ಛೆ ದಿನ್ ಅಂದರೆ ಇದೇನಾ? ಬೆಲೆ ಏರಿಕೆ ಮತ್ತು ಹಣದುಬ್ಬರದಿಂದ ಜನರ ಬದುಕು ನರಕವಾಗಿದೆ . ವಿದ್ಯುಚ್ಛಕ್ತಿ ಬಿಲ್ ಶೇ , 30 ರಷ್ಟು ಹೆಚ್ಚಾಗಿದೆ . ಪೆಟ್ರೋಲ್ , ಡೀಸೆಲ್ , ಅಡುಗೆ ಅನಿಲದ ಬೆಲೆ ಏರಿಕೆಯಂತೂ ನಿರಂತರವಾಗಿ ಸಾಗಿದೆ . ಬಹುಶಃ ಮೋದಿ ಅವರು ಪ್ರಧಾನಿ ಆಗಿರುವವರೆಗೂ ಈ ಬೆಳೆಗೆಸಿ ಇಳಿಯುವಂತೆ ಕಾಣುತ್ತಿಲ್ಲ . ಹೇಳುತ್ತ ಹೋದರೆ ಬಿಜೆಪಿ ಸರಕಾರ ಬಿನದಿಗೆ ಮಾಡಿರುವ ಹಾಗೂ ಮಾಡುತ್ತಿರುವ ದ್ರೋಹಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ . ಅಪ್ಪ ಮಾಡಿಟ್ಟ ಕಾಲವನ್ನು ಮಗ ತೀರಿಸಬೇಕಲ್ವೆ ? ಎಂದು ಸಂಸದ ಸಂಗಣ್ಣ ಕರಡಿ ಉಡಾಫೆಯಿಂದ ಪ್ರಶ್ನಿಸಿದ್ದಾರೆ , ಅಂದರೆ , ಕಾಂಗ್ರೆಸ್ ಅಪ್ಪ ಅದಂತಾಯ್ತು? ಎಂದು ಅವರು ಸಂಸದರ ಹೇಳಿಕೆಗೆ ಟಾಂಗ್ ನೀಡಿದರು.

ಬಿಜೆಪಿಯಂತಹ ಜನವಿರೋಧಿ , ಪ್ರಗತಿವಿರೋಧಿ ಮಗನನ್ನು ಹೊಂದಲು ಕಾಂಗ್ರೆಸ್ ಎಂದಿಗೂ ಬಯಸುವುದಿಲ್ಲ , ಅಂಕಿಅಂಶಗಳು ಸುಳ್ಳು ಹೇಳುವುದಿಲ್ಲ , ಖುದ್ದು ಕೇಂದ್ರ ಸರಕಾರವೇ ಬಿಡುಗಡೆ ಮಾಡಿರುವ ಅಂಕಿಅಂಶಗಳು ಸತ್ಯವನ್ನು ಸ್ಪಷ್ಟವಾಗಿ ಹೇಳುತ್ತಿವೆ , ಜನವಿರೋಧಿ ಸರಕಾರ ಯಾರದು ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ , ದೇಶಭಕ್ತಿಯ ಹೆಸರಿನಲ್ಲಿ , ಅತ್ಮನಿರ್ಭರ ಹೆಸರಿನಲ್ಲಿ ಜನರ ಬದುಕನ್ನು ದುರ್ಭರವಾಗಿಸಿರುವ ಬಿಜೆಪಿ ಸರಕಾರ , ಕೊರೊನಾದಂತಹ ಸಂಕಷ್ಟ ಕಾಲದಲ್ಲಿಯೂ ಜನರ ರಕ್ತ ಹೀರುವುದನ್ನು ಬಿಟ್ಟಿಲ್ಲ . ತರಿಗೆ ಹೆಸರಿನಲ್ಲಿ , ಸ್ವಾವಲಂಬಿ ಭಾರತದ ಹೆಸರಿನಲ್ಲಿ ಜನರ ಜೇಬಿನಿಂದ ದುಡ್ಡು ಕಿತ್ತುಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಮಾಡಿಲ್ಲ . ಅಂತಹ ನೀಚ ಕೆಲಸ ಮಾಡುತ್ತಿರುವುದು ಬಿಜೆಪಿ ಸರಕಾರ , ವಿದ್ಯುತ್ , ನೀರು , ಇಂಧನ ಆಹಾರ ಮುಂತಾದವು ಜನರ ಮೂಲಭೂತ ಅವಶ್ಯಕತೆಗಳೇ ಹೊರತು ಆಡಂಬರವಲ್ಲ . ಇಂತಹ ಕನಿಷ್ಠ ಸೌಕರ್ಯಗಳಿಗೂ ಅಪಾರ ತೆರಿಗೆ ಪಡೆಯುತ್ತಿರುವುದು ಜನವಿರೋಧಿ ಕೆಲಸವಾಗುತ್ತದೆ . ಅಂತಹ ನೀಚ ಕೆಲಸವನ್ನು ಬಿಜೆಪಿ ಮಾಡುತ್ತ ಬಂದಿದೆ . ಆದರೆ , ತಮ್ಮ ಪಾಪದ ಕೆಲಸವನ್ನು ಕಾಂಗ್ರೆಸ್ ಪಕ್ಷದ ತಲೆಗೆ ಕಟ್ಟುವ ದುರ್ಬುದ್ಧಿ ತೋರಿಸುತ್ತಿದೆ ಎಂದು ಅವರು ದೂರಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜುಲ್ಲು ಖಾದ್ರಿ, ಎಸ್. ಬಿ.ನಾಗರಳ್ಳಿ, ಪ್ರಸನ್ನ ಗಡಾದ, ರವಿ ಕುರಗೋಡ ಮತ್ತಿತರರು ಇದ್ದರು.


Spread the love

LEAVE A REPLY

Please enter your comment!
Please enter your name here