ಸಚಿವ ಬಿ.ಸಿ.ಪಾಟೀಲ‌ಗೆ ಬಿಜೆಪಿ ಕಾರ್ಯಕರ್ತರಿಂದಲೇ ಘೇರಾವ್!

0
Spread the love

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಜಿಲ್ಲೆಯಲ್ಲಿ ಭತ್ತದ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಸ್ವಪಕ್ಷದ ಕಾರ್ಯಕರ್ತರೇ ಸಚಿವ ಬಿ.ಸಿ.ಪಾಟೀಲಗೆ ಘೇರಾವ್ ಹಾಕಿ ಮನವಿ ಸಲ್ಲಿಸಿದರು.
ಹಿಟ್ನಾಳ ಹೋಬಳಿಯ ಅನೇಕ ರೈತರು ರವಿವಾರ ಬಿಜೆಪಿ ಕಾರ್ಯಕರ್ತರ ಮುಂದಾಳತ್ವದಲ್ಲಿ ಕೃಷಿ ಸಚಿವ ಬಿಸಿ ಪಾಟೀಲ್ ಅವರಿಗೆ ಕೊಪ್ಪಳದಲ್ಲಿ ಘೇರಾವ್ ಹಾಕಿ ಶೀಘ್ರದಲ್ಲಿ ಕೊಪ್ಪಳ ಮತ್ತು ಹಿಟ್ನಾಳ ಹೋಬಳಿ ವ್ಯಾಪ್ತಿಯಲ್ಲಿ ಭತ್ತದ ಖರೀದಿ ಕೇಂದ್ರ ಪ್ರಾರಂಭಿಸಲು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ ಶಾಸಕ ಕೆ ರಾಘವೆಂದ್ರ ಹಿಟ್ನಾಳ ಇದ್ದರು‌.
ಕೊಪ್ಪಳ ಜಿಲ್ಲೆಯಲ್ಲಿ ಭತ್ತದ ಕಟಾವು ಆರಂಭವಾಗಿದ್ದು ಭತ್ತದ ಬೆಲೆ ಕನಿಷ್ಠ ದರಕ್ಕೆ ಕುಸಿದಿದ್ದು, ರೈತರು ಕಂಗಾಲಾಗುವ ಪರಿಸ್ಥಿತಿ ಬಂದಿದೆ. ಇದರಿಂದ ರೈತರಿಗೆ ತುಂಬಾ ತೊಂದರೆ ಆಗಿದ್ದು, ಕೂಡಲೇ ಕೇಂದ್ರ ಸರ್ಕಾರ ನಿಗದಿಪಡಿಸಿದ MSP ದರದಲ್ಲಿ ಭತ್ತವನ್ನು ಖರೀದಿ ಮಾಡಿದರೆ ರೈತರಿಗೆ ಅನೂಕೂಲ ಆಗಲಿದೆ. ಹಾಗೂ ಭತ್ತದ ಕಟಾವು ಯಂತ್ರದ ದರವನ್ನು ಯಂತ್ರದ ಮಾಲಕರು ಬೇಕಾಬಿಟ್ಟಿ ನಿಗದಿ ಮಾಡಿದ್ದು ಅಂದಾಜು ಎರಡು ಸಾವಿರದಿಂದ ನಾಲ್ಕು ಸಾವಿರ ರೂ.ವರೆಗೆ ನಿಗದಿ ಮಾಡಿ ರೈತರಿಂದ ವಸೂಲಿ ಮಾಡುತ್ತಿದ್ದಾರೆ. ಇದನ್ನೂ ಕೂಡಲೆ ಜಿಲ್ಲಾಧಿಕಾರಿಗಳ ಮುಖಾಂತರ ದರವನ್ನು ಒಂದು ಗಂಟೆಗೆ ಹದಿನೆಂಟು ನೂರು ರೂಪಾಯಿಗಳನ್ನು ನಿಗದಿಪಡಿಸಬೇಕೆಂದು ಆಗ್ರಹಿಸಿದರು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು ಇದೇ ತಿಂಗಳಿನಿಂದ ರೈತರ ನೋಂದಣಿ ಕಾರ್ಯ ಪ್ರಾರಂಭಿಸಿ ಕೂಡಲೇ ಕೊಪ್ಪಳದಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಎಂಎಸಿಪಿ ದರದಲ್ಲಿ ಕೊಪ್ಪಳದಲ್ಲಿ ಕೇಂದ್ರವನ್ನು ಆರಂಭಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಹಿಟ್ನಾಳ ಹೋಬಳಿಯ ಹುಲಿಗಿ ತಾ.ಪಂ‌.ಸದಸ್ಯ ಪಾಲಾಕ್ಷಪ್ಪ ಗುಂಗಾಡಿ, ಕೊಪ್ಪಳ ಬಿಜೆಪಿ ತಾಲೂಕು ಅಧ್ಯಕ್ಷ ಪ್ರದೀಪ ಹಿಟ್ನಾಳ, ಎಪಿಎಂಸಿ ಸದಸ್ಯ ವಿಶ್ವನಾಥ್ ರಾಜ, ರೈತ ಮುಖಂಡರಾದ ಶಿವಬಾಬು ಚಲಸಾನಿ, ವೆಂಕಟರಾವ, ಚನ್ನಪ್ಪಗೌಡ್ರ, ಶೀನಪ್ಪ, ಹನುಮಂತಪ್ಪ, ರಾಮರಾವ, ಮಹೇಶ ಮಂಗಳೂರ, ಬಸವರಾಜ್ ಕೆ.ವಿಶ್ವನಾಥ ಹೀರೆಮಠ, ಮಂಜುನಾಥ ಪೂಜಾರ, ಭಿಮಣ್ಣ ಹಿಟ್ನಾಳ ಹಾಗೂ ಹಿಟ್ನಾಳ, ಅಗಳಕೇರಿ, ಶಿವಪುರ, ಹುಲಿಗಿ ಗ್ರಾಮದ ರೈತರು ಸಚಿವರಿಗೆ ಮನವಿ ಸಲ್ಲಿಸಿದರು.

Advertisement

Spread the love

LEAVE A REPLY

Please enter your comment!
Please enter your name here