
ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ರಾಷ್ಟ್ರಧ್ವಜಾರೋಹಣದ ನಂತರ ಆಯೋಜಿಸಿದ್ದ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಅವರ ಸುದ್ದಿಗೋಷ್ಠಿಯನ್ನು ಪ್ರಾದೇಶಿಕ ಹಾಗೂ ಸ್ಥಳೀಯ ಪತ್ರಕರ್ತರು ಬಹಿಷ್ಕರಿಸಿದರು.
ಹಾಲಪ್ಪ ಆಚಾರ್ ಸಚಿವರಾದ ನಂತರ ಜಾಹೀರಾತು ನೀಡಿಕೆಯಲ್ಲಿ ಮಾಡುತ್ತಿರುವ ತಾರತಮ್ಯ ಖಂಡಿಸಿ ಮಾಧ್ಯಮಗೋಷ್ಠಿಯ ಕೋಣೆಗೆ ಸಚಿವರು ಆಗಮಿಸುತ್ತಿದ್ದಂತೆ ಅವರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರುತ್ತಾ, ಸಾಂಕೇತಿಕ ಹೋರಾಟದ ರೂಪದಲ್ಲಿ ಹಾಜರಿದ್ದ ಸ್ಥಳೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳ ವರದಿಗಾರರು ಹೊರ ನಡೆದರು.
ಪತ್ರಕರ್ತರ ಈ ನಡೆಯಿಂದ ಕೆಲಕ್ಷಣ ಅವಕ್ಕಾದ ಸಚಿವರು ನಂತರ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಸಂಸದ ಕರಡಿ ಸಂಗಣ್ಣ ಪತ್ರಕರ್ತರ ಮನವೊಲಿಸುವ ಪ್ರಯತ್ನ ಮಾಡಿದರೂ ಫಲ ಸಿಗಲಿಲ್ಲ.
ಈ ವೇಳೆ ಪತ್ರಕರ್ತರಾದ ಹರೀಶ್ ಎಸ್.ಎಚ್.ಸಾದಿಕ್ ಅಲಿ, ದೇವು ನಾಗನೂರು, ಬಸವರಾಜ ಕರುಗಲ್, ನಾಗರಾಜ ವೈ.ಎನ್, ಶಿವರಾಜ ನುಗಡೋಣಿ, ಮೌಲಾಹುಸೇನ್ ಬುಲ್ಡಿಯಾರ್, ರವಿಚಂದ್ರ ಬಡಿಗೇರ, ಸಿದ್ದಪ್ಪ ಹಂಚಿನಾಳ, ಶಿವಕುಮಾರ್ ಹಿರೇಮಠ, ಬಸವರಾಜ ಗುಡ್ಲಾನೂರು, ವೈ.ಬಿ.ಜೂಡಿ, ಫಕೀರಪ್ಪ ಗೋಟೂರು, ಎನ್.ಎಂ.ದೊಡ್ಡಮನಿ, ಮಂಜುನಾಥ ಗೊಂಡಬಾಳ, ಬ್ರಹ್ಮಾನಂದ, ರಾಜಾಸಾಬ್ ಮುಲ್ಲಾರ್, ಕಾಸೀಂಸಾಬ್ ನದಾಫ್, ಪ್ರಭು ಗಾಳಿ ಸೇರಿದಂತೆ ಅನೇಕ ಪತ್ರಕರ್ತರು ಬಹಿಷ್ಕಾರ ಹಾಕಿದರು.