ಮುಂಬೈ: ಸರಳ ಮದುವೆ ಮಾಡಿಕೊಂಡರೂ, ಪತ್ನಿಗೆ ನೀಡಿದ ಉಂಗುರದ ಮೂಲಕ ಬಾಲಿವುಡ್ ನಟ ಆಮಿರ್ ಖಾನ್ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ತಮ್ಮ ಮೂರನೇ ಪತ್ನಿ ಗೌರಿ ಸ್ಪ್ರಾಟ್ ಅವರಿಗೆ ನೀಡಿರುವ ಮಡಗಾಸ್ಕರ್ ರೂಬಿ ಉಂಗುರದ ಅಂದಾಜು ಬೆಲೆ 25 ಲಕ್ಷ ರೂಪಾಯಿಗೂ ಹೆಚ್ಚು ಎನ್ನಲಾಗಿದ್ದು, ಈ ರಿಂಗ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಖಾಸಗಿ ಸಮಾರಂಭದಲ್ಲಿ ನಡೆದ ರಿಜಿಸ್ಟರ್ ಮ್ಯಾರೇಜ್ ಬಳಿಕ ಆಮಿರ್ ಮತ್ತು ಗೌರಿ ಉಂಗುರ ವಿನಿಮಯ ಮಾಡಿಕೊಂಡಿದ್ದರು. ರಾಜಮನೆತನದ ಆಭರಣಗಳ ಮಾದರಿಯಲ್ಲಿ ವಿನ್ಯಾಸಗೊಳಿಸಲಾದ ಈ ಉಂಗುರದಲ್ಲಿ ಅಪರೂಪದ ಮಡಗಾಸ್ಕರ್ ರೂಬಿ ಹಾಗೂ ಅದರ ಸುತ್ತ 40 ವಜ್ರದ ಹರಳುಗಳನ್ನು ಅಳವಡಿಸಲಾಗಿದೆ.
ಮಾಹಿತಿಯ ಪ್ರಕಾರ, ಈ ಉಂಗುರ ತಯಾರಿಸಲು 131 ಕುಶಲಕರ್ಮಿಗಳು ಸುಮಾರು 256 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ. ಶುದ್ಧ ರೂಬಿ ಕಲ್ಲು ಸಂಗ್ರಹಿಸಲು ಮಾತ್ರ ಮೂರು ತಿಂಗಳು ಬೇಕಾಗಿದ್ದು, ಉಂಗುರದ ನಿರ್ಮಾಣ ವೆಚ್ಚವೇ ಮದುವೆಯ ಒಟ್ಟು ಖರ್ಚಿಗಿಂತ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ಸರಳ ವಿವಾಹದ ಮೂಲಕ ಗಮನ ಸೆಳೆದಿದ್ದ ಆಮಿರ್ ಖಾನ್, ಇದೀಗ ಐಷಾರಾಮಿ ಉಂಗುರದ ಮೂಲಕ ಮತ್ತೆ ಸುದ್ದಿಯಾಗಿದ್ದು, ಗೌರಿಗೆ ನೀಡಿದ ಈ ವಿಶೇಷ ಉಡುಗೊರೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.



