ಸಾಂಪ್ರದಾಯಿಕ ಉಡುಗೆಯಲ್ಲಿ ಪೊಲೀಸರು! ಡಿವೈಎಸ್‌ಪಿ ನೇತೃತ್ವದಲ್ಲಿ ಹೊಸ ವರ್ಷಾಚರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ನಿನ್ನೆ ರಾತ್ರಿಯಿಡಿ ಬಂದೋಬಸ್ತ್‌ನಿಂದ ಬಸವಳಿದಿದ್ದರೂ ಸಹ ಬೆಳಗಾಗುತ್ತಲೇ ಕೊಪ್ಪಳ ಜಿಲ್ಲೆಯ ಪೊಲೀಸರು ಸಂಭ್ರಮದಿಂದ ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದಾರೆ. ಬಹಳ ವರ್ಷಗಳಿಂದ ಕೊಪ್ಪಳದ ಜನತೆಯ ಬೇಡಿಕೆಯಾಗಿದ್ದ ಟ್ರಾಫಿಕ್ ಲೈಟ್, ಸಿಗ್ನಲ್ , ಕ್ಯಾಮೆರಾ ಅಳವಡಿಕೆ ಮತ್ತು ಪೊಲೀಸರಿಗೆ ಶೆಲ್ಟರ್ ವ್ಯವಸ್ಥೆಯನ್ನು ಇಂದು ಅಧಿಕೃತವಾಗಿ ಉದ್ಘಾಟಿಸಲಾಯಿತು.

Advertisement

ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಇಂದು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮದುವೆ ಮನೆ ಸಿಂಗರಿಸಿದಂತೆ ವೃತ್ತಗಳಲ್ಲಿರುವ ಟ್ರಾಫಿಕ್ ಪೊಲೀಸರ ಶೆಲ್ಟರ್‌ಗಳನ್ನು ಸಿಂಗಾರ ಮಾಡಲಾಗಿತ್ತು. ಮದುವೆಗೆ ಸಿದ್ದರಾದ ಮದುಮಕ್ಕಳಂತೆ ಪೊಲೀಸ್ ಅಧಿಕಾರಿಗಳು ಡ್ರೆಸ್ಸಿಂಗ್ ಮಾಡಿಕೊಂಡಿದ್ದ ಎಲ್ಲರನ್ನು ಸೆಳಯಿತು.

ರೇಷ್ಮಿಯ ಲುಂಗಿ, ರೇಷ್ಮಿ ಶರ್ಟ್ ಮೇಲೊಂದು ರೇಷ್ಮಿ ಶಲ್ಯ ಹೊದ್ದುಕೊಂಡು ಭರ್ಜರಿ ಸಂಭ್ರಮದಿಂದ ಪೊಲೀಸರು ಭಾಗವಹಿಸಿದ್ದರು. ಕೊಪ್ಪಳ ಡಿವಿಜನ್‌ನ ಎಲ್ಲ ಸಿಪಿಐಗಳು, ಪಿಎಸ್ಐ ಗಳು, ಇನ್ಸಪೆಕ್ಟರ್‌ಗಳು ಎಲ್ಲರೂ ಒಂದೇ ಡ್ರೆಸ್ ಕೋಡ್‌ನಲ್ಲಿದ್ದದ್ದು ಕಂಡು ಬಂತು.

ಇದೇ ಧಿರಿಸಿನಲ್ಲಿ ಗಣ್ಯರ ಮನೆಗೆ ಭೇಟಿ ನೀಡಿ ಹೊಸ ವರ್ಷಕ್ಕೆ ಶುಭ ಕೋರಿದರು. ಸಂಸದ ಕರಡಿ ಸಂಗಣ್ಣನವರ ಮನೆಗೆ ಭೇಟಿ ನೀಡಿ ಹೂಗೂಚ್ಛ ನೀಡಿ ಕೇಕ್ ಕತ್ತರಿಸಿ ಶುಭಕೋರಿ ಬಿಜೆಪಿ ಮುಖಂಡ ಅಮರೇಶ ಕರಡಿಯವರ ಜೊತೆ ಗ್ರೂಪ್ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

ಕೊಪ್ಪಳ ಡಿವೈಎಸ್‌ಪಿ ವೆಂಕಟಪ್ಪ‌ ನೇತೃತ್ವದಲ್ಲಿ ಕೊಪ್ಪಳ ಪೊಲೀಸರ ತಂಡ ಸಾಂಪ್ರದಾಯಿಕ ಉಡುಗೆಯಲ್ಲಿ ಹಾಗೂ ಗಂಗಾವತಿ ಡಿವೈಎಸ್‌ಪಿ ಆರ್.ಎಸ್.ಉಜ್ಜನಕೊಪ್ಪ ನೇತೃತ್ವದಲ್ಲಿ ಸಹಜ ಧಿರಿಸಿನಲ್ಲಿ ಗಂಗಾವತಿ ಪೊಲೀಸರ ತಂಡ ಗಣ್ಯರನ್ನು ಭೇಟಿ ಮಾಡಿ ಹೊಸ ವರ್ಷದ ಶುಭಾಶಯ ಕೋರಿದ ಫೋಟೋಗಳು ವೈರಲ್ ಆಗಿವೆ.


Spread the love

LEAVE A REPLY

Please enter your comment!
Please enter your name here