Advertisement
ವಿಜಯಸಾಕ್ಷಿ ಸುದ್ದಿ, ಗಂಗಾವತಿ
ತಾಲೂಕಿನ ಸಾಣಾಪುರ ಎಡದಂಡೆ ಕಾಲುವೆಯ ಕೆರೆಯಲ್ಲಿ ಜಂಪಿಂಗ್ ಮಾಡಲು ಹೋಗಿ ಹೈದರಾಬಾದ್ ಮೂಲದ ಇಬ್ಬರು ಐಟಿ ಬಿಟಿ ಉದ್ಯೋಗಿಗಳು ನಾಪತ್ತೆಯಾಗಿರುವ ಘಟನೆ ಸೋಮವಾರ ಬೆಳಗಿನ ಜಾವ ಜರುಗಿದೆ.
ಹೈದರಾಬಾದ್ ಮೂಲದ ಕೆ.ಆರ್.ಪುರಂ ನಿವಾಸಿಗಳಾದ ಮಧುಕಿರಣ್ (25) ಹಾಗೂ ರಾಜೇಶ್ ಕುಮಾರ್ (26) ಸಂಗಾಪುರ ಹತ್ತಿರವಿರುವ ಮೇಘರಾಜ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಸೋಮವಾರ ಬೆಳಿಗ್ಗೆ ಸಾಣಾಪುರ ಕೆರೆಯಲ್ಲಿ ಈಜಾಡಲು ತೆರಳಿದ್ದ ಸಂದರ್ಭದಲ್ಲಿ ಕಲ್ಲಿನ ಮೇಲಿಂದ ಜಂಪಿಂಗ್ ಮಾಡುವ ಸಂದರ್ಭದಲ್ಲಿ ಇಬ್ಬರೂ ನೀರಿನಲ್ಲಿ ನಾಪತ್ತೆಯಾಗಿದ್ದಾರೆ.
ಸ್ಥಳಕ್ಕೆ ಪೊಲೀಸ್, ಗೃಹರಕ್ಷಕ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮತ್ತೆ ಕರೆದು ತೊಡಗಿದ್ದಾರೆ. ರಾಜೇಶ್ ಕುಮಾರ್ ಮೃತದೇಹ ಪತ್ತೆಯಾಗಿದ್ದು ಇನ್ನೂ ಮಧುಕಿರಣ್ ಪತ್ತೆಯಾಗಿಲ್ಲ .