ವಿಜಯಸಾಕ್ಷಿ ಸುದ್ದಿ, ಗದಗ
Advertisement
ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಕೆಎಸ್‌ಆರ್ ಟಿಸಿ ಡಿಸಿ ಫಕ್ಕೀರಯ್ಯ ಹಿರೇಮಠ ಅವರ ವಿರುದ್ಧ ರೈತರೊಬ್ಬರು ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಕುಂಬಾರಗಟ್ಟಿ ಪ್ಲಾಟ್ ನ ಚಿದಾನಂದ ಹರಿಜನ ಎಂಬುವವರೇ ದೂರು ನೀಡಿದವರು.
ಅನೇಕ ವರ್ಷಗಳಿಂದ ನ್ಯಾಯಯುತ ಹೋರಾಟ ಮತ್ತು ಸಂಘಟನೆ ಮಾಡಿಕೊಂಡು ಬಂದಿದ್ದೇನೆ. ಕಳೆದ ಸೆಪ್ಟೆಂಬರ್ ೧೨ ರಂದು ಹೋರಾಟದ ಬಗ್ಗೆ ಕೇಳಲು ಹೋದಾಗ ಸಾರಿಗೆ ಡಿಸಿ ಫಕ್ಕೀರಯ್ಯ ಅವರು, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಅಲ್ಲದೇ, ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಿನ್ನೆ (ಜ.೮) ರಂದು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಗದಗ ಶಹರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.