ವಿಜಯಸಾಕ್ಷಿ ಸುದ್ದಿ, ಗದಗ
ಭಾನುವಾರ ರಾತ್ರಿ ರೌಡಿ ಶೀಟರ್ ಮುತ್ತು ಅಲಿಯಾಸ್ ಗೋವಿಂದಪ್ಪ ಚಲವಾದಿಯ ಬರ್ಬರ್ ಹತ್ಯೆಗೆ ಆತನ ಸ್ನೇಹಿತ, ರೌಡಿ ಶೀಟರ್ ಹಾಗೂ ಆತನ ಸಹಚರರನ್ನು ಪೊಲೀಸರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾನುವಾರ ರಾತ್ರಿ ಮನೆಯಿಂದ ಕರೆದುಕೊಂಡು ಬಂದ 220- ಪಕ್ಕು ಅಂತಾನೇ ಕರೆಸಿಕೊಳ್ಳುತ್ತಿದ್ದ ಪ್ರಕಾಶ್ ಕೋರಿಶೆಟ್ಟರ್ ಹಾಗೂ ಆತನ ಸಹಚರರು ಕಾರಣ ಎಂದು ಕೊಲೆಗೀಡಾದ ಮುತ್ತು ಚಲವಾದಿಯ ಕುಟುಂಬಸ್ಥರು ದೂರು ನೀಡಿದ್ದಾರೆ.
ಪ್ರಕಾಶ್ ಕೋರಿಶೆಟ್ಟರ್ ಮೀಟರ್ ಬಡ್ಡಿ ದಂದೆ ನಡೆಸುತ್ತಿದ್ದ ಎನ್ನಲಾಗಿದ್ದು, ವಾರದ ಬಡ್ಡಿಗೆ ಹಣ ಕೊಡುತ್ತಿದ್ದ. ಸಾವಿರಕ್ಕೆ ನೂರು ರೂಪಾಯಿ ಬಡ್ಡಿಯಂತೆ ಹಣ್ಣಿನ ವ್ಯಾಪಾರಿಗಳು, ಹೂ ಮಾರಾಟಗಾರರು ಪ್ರಕಾಶ್ ಕೋರಿಶೆಟ್ಟರ್ ಬಳಿ ಹಣ ಪಡೆಯುತ್ತಿದ್ದರು.

ತಿಂಗಳಿಗೆ 100 ಕ್ಕೆ 5ರೂ, 8ರೂ. ಹಾಗೂ 10 ರಂತೆಯೂ ಹಣ ಕೊಡುತ್ತಿದ್ದ ಪ್ರಕಾಶ್ ಕೋರಿಶೆಟ್ಟರ್, ಮುಖ ನೋಡಿ ಬಡ್ಡಿ ದರ ಫಿಕ್ಸ್ ಮಾಡುತ್ತಿದ್ದ ಎನ್ನಲಾಗಿದೆ. ಹೊಸಗಿರಾಕಿಗಳಿಗೆ 12ರೂಪಾಯಿನಂತೆಯೂ ಹಣ ಕೊಡುತ್ತಿದ್ದನಂತೆ.
ಇದನ್ನೂ ಓದಿ ಬಡ್ಡಿ ವ್ಯವಹಾರ ಕಲಿಸಿದಾತಗೇ ಮುಹೂರ್ತವಿಟ್ಟ ರೌಡಿ ಶೀಟರ್! ಗುರುವಿಗೇ ಗುನ್ನ!
ಇದೇ ರೀತಿ ಮುತ್ತು ಚಲವಾದಿಗೂ 20 ಸಾವಿರ ಹಣ ಕೊಟ್ಟಿದ್ದ ಎಂದು ಪೋಷಕರು ಹೇಳುತ್ತಿದ್ದಾರೆ. ಇದೇ ಹಣ ಕೊಡಲು ತಡವಾಗಿದ್ದಕ್ಕೆ ಆಗಾಗ ಜಗಳ ಮಾಡುತ್ತಿದ್ದನಂತೆ. ಕೊನೆಗೂ ಕೊಲೆ ಮಾಡುವ ಉದ್ದೇಶದಿಂದ ಭಾನುವಾರ ರಾತ್ರಿ ಕರೆತಂದು ತನ್ನ ಕೆಲ ಸಹಚರರೊಂದಿಗೆ ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಅಷ್ಟೊಂದು ದುಡ್ಡು ಎಲ್ಲಿಂದ ಬರುತ್ತಿತ್ತು?
ಕೊಲೆಗೀಡಾದ ಮುತ್ತು ಚಲವಾದಿಯ ಪೋಷಕರು ಹೇಳಿದಂತೆ ಕೊಲೆ ಆರೋಪಿ ಪ್ರಕಾಶ್ ಕೋರಿಶೆಟ್ಟರ್ ಬಳಿ ಅಷ್ಟೊಂದು ಹಣ ಎಲ್ಲಿಂದ ಬರುತ್ತಿತ್ತು. ಆತ ಲಕ್ಷ ಲಕ್ಷ ಹಣ ಅದ್ಹೇಗೆ ಬಡ್ಡಿಗೆ ಬಿಡುತ್ತಿದ್ದ ಎಂಬ ಸಂಶಯ ಆತನ ಕುಟುಂಬದ ಹಿನ್ನೆಲೆ ಬಲ್ಲವರದು.

ಹುಬ್ಬಳ್ಳಿಯಿಂದ ಹಣ ಬರ್ತಾ ಇತ್ತಾ?
ಪ್ರಕಾಶ್ ಕೋರಿಶೆಟ್ಟರ್ ಅಷ್ಟೇನೂ ಸ್ಥಿತಿವಂತನಲ್ಲ. ಆದರೆ ಆತ ಬೆಳೆದಿದ್ದು ಮಾತ್ರ ರೌಡಿ ಶೀಟರ್ಸ್ ಬಳಿ. ಹೀಗಾಗಿಯೇ ಆತ ಪುಂಡ ಪೋಕರಿಯಂತೆ ತಿರುಗುತ್ತಿದ್ದ. ಆತ ಯಾರ ಜೊತೆಗಾದರೂ ಕಿರಿಕ್ ಮಾಡಿಕೊಂಡು ಪ್ರಕಾಶ್ ನ ಆ ರೌಡಿ ಶೀಟರ್ಸ್ ಕುಟುಂಬ ಬೆಂಗಾವಲು ಇತ್ತು. ಆ ಕುಟುಂಬದವರ ಸಂಪರ್ಕದಿಂದಲೇ ಹುಬ್ಬಳ್ಳಿಯ ಕೆಲ ರೌಡಿ ಶೀಟರ್ಸ್ ಪರಿಚಯ ಮಾಡಿಕೊಂಡಿದ್ದ ಪ್ರಕಾಶ್ ಬರು ಬರುತ್ತಾ ಅವರಿಂದಲೇ ಹಣ ಪಡೆದು ಬಡ್ಡಿ ವ್ಯವಹಾರಕ್ಕೆ ಇಳಿದ ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ.
ಪೊಲೀಸರ ತನಿಖೆಯ ಕುರಿತು…
ಈ ಕೊಲೆ ಪ್ರಕರಣವನ್ನು ಪೊಲೀಸರು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ. ಕೊಲೆ ಆರೋಪ ಹೊತ್ತ ಪ್ರಕಾಶ್ ಕೋರಿಶೆಟ್ಟರ್, ಕೊಲೆಯ ನಂತರ ಯಾರಿಗೆ ಪೋನ್ ಮಾಡಿದ, ಅದಕ್ಕೂ ಮೊದಲು ಆತ ಯಾರನ್ನು ಸಂಪರ್ಕ ಮಾಡಿದ್ದ, ಮೀಟರ್ ಬಡ್ಡಿಗೆ ಹಣ ಕೊಡುತ್ತಿದ್ದ ಹುಬ್ಬಳ್ಳಿಯ ಮೂಲದವರು ಯಾರು? ಗದಗನಲ್ಲಿ ಪ್ರಕಾಶ್ ನ ಬೆಳೆಸಿದವರು ಯಾರು? ಕೊಲೆಗೆ ಸಾಥ್ ಕೊಟ್ಟವರು ಯಾರು? ಕೊಲೆ ಮಾಡಿದ ಪ್ರಕಾಶ್ ಹಾಗೂ ಆತನ ಸಹಚರರು ಎಷ್ಟು ಜನ ಇದ್ರು? ಎಂಬ ಇತ್ಯಾದಿ ಪ್ರಶ್ನೆಗಳನ್ನು ಮಾಡುತ್ತಿದ್ದು, ತನಿಖೆಯ ನಂತರ ಇಷ್ಟೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬಹುದು.

ಒಬ್ಬ ರೌಡಿ ಶೀಟರ್, ಮತ್ತೊಬ್ಬ ರೌಡಿ ಶೀಟರ್ ನ ಕೊಲೆ ಮಾಡುವ ಮಟ್ಟಿಗೆ ಈ ಮೀಟರ್ ಬಡ್ಡಿ ಮಾಫಿಯಾ ಗದಗನಲ್ಲಿ ಬೆಳೆದು ನಿಂತಿದೆ. ಇದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಒಟ್ನನಲ್ಲಿ ಇನ್ನು ಮುಂದಾದರೂ ಪೊಲೀಸರು ಮೀಟರ್ ಬಡ್ಡಿ ಮಾಫಿಯಾಗೆ ಕಡಿವಾಣ ಹಾಕಬೇಕು. ಜೊತೆಗೆ ರೌಡಿ ಶೀಟರ್ಸ್ ಬಾಲ ಬಿಚ್ಚದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಅನ್ನೋದು ಸಾರ್ವಜನಿಕರು ಒತ್ತಾಯ.