ವಿಜಯಸಾಕ್ಷಿ ಸುದ್ದಿ, ಗದಗ
ಹಿಂದೂ ದೇವರಿಗೆ ಬೈದ ಅಂತ ನಕಲಿ ಬಾಬಾ ಒಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಗದಗನಲ್ಲಿ ನಡೆದಿದೆ. ಗದಗದ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಡೋಂಗಿ ಬಾಬಾ ಆಸೀಫ್ ಜಾಗಿರದಾರ ಎಂಬಾತನಿಗೆ ಜನ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಡೋಂಗಿ ಬಾಬಾ ಮೂಲತಃ ಬಾಗಲಕೋಟ ಜಿಲ್ಲೆಯವನಾಗಿದ್ದು, ನಗರದ ಗಂಗಿಮಡಿಯಲ್ಲಿನ ತನ್ನ ಹೆಂಡತಿ ತವರುಮನೆಯಲ್ಲಿಯೇ ತಂಗಿದ್ದ.

ಹಲವು ವರ್ಷಗಳಿಂದ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ಡೋಂಗಿತನದ ಪವಾಡಗಳನ್ನ ಮಾಡಿ ಜನರಿಗೆ ನಂಬಿಸಿದ್ದ. ಕುದಿಯೋ ಎಣ್ಣೆ ಹಾಗೂ ಸುಡು ಸುಡು ತುಪ್ಪದಲ್ಲಿ ಕೈ ಹಾಕುತ್ತಿದ್ದ ಡೋಂಗಿ ಬಾಬಾ, ಏಕಾಏಕಿ ಮೈಮೇಲೆ ದೇವರ ಬಂದಂತೆ ನಟಿಸಿ ಜನರನ್ನ ನಂಬಿಸುತ್ತಿದ್ದ ಎನ್ನಲಾಗಿದೆ.

ಬಾಬಾ ಆಸೀಪ್ ಜಾಗಿರದಾರ, ನಿಂಬೆಹಣ್ಣು, ಬೂದಿ ಕೊಟ್ಟು ಜನರಿಗೆ ಮೋಸ ಮಾಡುತ್ತಿದ್ದ ಅಂತ ಜನರು ಆರೋಪಿಸಿದ್ದಾರೆ. ಹೀಗಾಗಿ ಈ ಡೋಂಗಿ ಬಾಬಾ ನಂಬಿ ಮೋಸ ಹೋದ ಜನ್ರರು ರೊಚ್ಚಿಗೆದ್ದಿದ್ದರು. ಜನ್ರ ಮೈಂಡ್ ವಾಶ್ ಮಾಡಿ ಸಾವಿರಾರು ರೂ. ಹಣ ಲೂಟಿ ಮಾಡುತ್ತಿದ್ದನಂತೆ. ಡೋಂಗಿ ಬಾಬಾನ ಅಸಲಿ ಮುಖವಾಡ ಗೊತ್ತಾಗುತ್ತಿದ್ದಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಾನು ಮಾಡಿದ್ದು ಮೋಸ.. ತಪ್ಪಾಗಿದೆ ಕ್ಷಮಿಸಿ ಅಂತಾ ಬೇಡಿಕೊಂಡ್ರೂ ಧರ್ಮದೇಟು ಕೊಟ್ಟ ಜನರು ಗದಗ ಗ್ರಾಮೀಣ ಠಾಣೆಯ ಪೊಲೀಸರಿಗೆ ಆತನನ್ನ ಒಪ್ಪಿಸಿದ್ದಾರೆ.