ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಯಾದಗಿರಿ
ಮನೆ ಮುಂದೆ, ಅಂಗಡಿ ಮುಂದೆ ನಿಲ್ಲಿಸುತ್ತಿದ್ದ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಚಾಲಾಕಿ ಬೈಕ್ ಕಳ್ಳನನ್ನು ಹುಣಸಗಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ಹಲವು ತಿಂಗಳಿನಿಂದ ಪೊಲೀಸರಿಗೆ ತಲೆನೋವಾಗಿದ್ದ ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಮೇನಳ್ಳಿ ಗ್ರಾಮದ ಚಾಲಾಕಿ ಕಳ್ಳ ಮೌನೇಶ್ ಅಲಿಯಾಸ್ ಪಿಂಟ್ಯಾ ಜಗನ್ನಾಥ್ ಬಡಿಗೇರ ಎಂಬಾತನನ್ನು ಪೊಲೀಸರು ಕದ್ದ ಬೈಕ್ ಸಮೇತ ಹೆಡಮುರಿ ಕಟ್ಟಿದ್ದಾರೆ.
ಬಂಧಿತ ಮೌನೇಶ್ ಅಲಿಯಾಸ್ ಪಿಂಟ್ಯಾನಿಂದ 9 ಲಕ್ಷ 48 ಸಾವಿರ ರೂ, ಮೌಲ್ಯದ ಒಟ್ಟು 25 ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ.
ಯಾದಗಿರಿ ಎಸ್ಪಿ ಖುಷಿಕೇಶ್ ಸೋನಾವಣೆ, ಡಿಎಸ್ಪಿ ವೆಂಕಟೇಶ ಅವರ ಮಾರ್ಗದರ್ಶನಲ್ಲಿ, ಹುಣಸಗಿ ಸಿಪಿಐ ದೌಲತ್ ಎನ್ ಕೆ, ಪಿಎಸ್ಐ ಬಾಪುಗೌಡ ಪಾಟೀಲ್, ಎಎಸ್ಐಗಳಾದ ಮಾಣಿಕ್ ರೆಡ್ಡಿ, ಮೌನೇಶ್, ಸಿಬ್ಬಂದಿಗಳಾದ ಮಡಿವಾಳಪ್ಪ, ಬಸವರಾಜ್, ಹಣಮಂತ, ವೆಂಕಟರಮಣ, ಕೆಂಚಪ್ಪ, ಸುನೀಲ್, ಮಂಜುನಾಥ್, ಲಿಂಗನಗೌಡ್, ರಮೇಶ್, ಅಜರುದ್ದೀನ್ ಪಟೇಲ್, ಸುರೇಶ್ ಹಾಗೂ ರಾಮನಗೌಡ ಈ ಕಾರ್ಯಾಚರಣೆಯಲ್ಲಿ ಇದ್ದರು. ಬೈಕ್ ಕಳ್ಳತನದ ಆರೋಪಿಯ ಈ ಕಾರ್ಯಾಚರಣೆಯಿಂದಾಗಿ ಸಿಬ್ಬಂದಿಗಳಿಗೆ ಎಸ್ಪಿ ಅವರು ಬಹುಮಾನ ಘೋಷಿಸಲಾಗಿದೆ.