- ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರೋಧಿಗಳಿಗೆ ತಿರುಗೇಟು
ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ
ಈಚೆಗೆ ಬಹಳಷ್ಟು ಜನರನ್ನು ನೋಡುತ್ತಿದ್ದೇವೆ. ಎಲುಬಿಲ್ಲದ ನಾಲಿಗೆಯಂತೆ ಮಾತನಾಡುತ್ತಿದ್ದಾರೆ. ಹೇಳಿಕೆ ಕೊಡುವ ಮೂಲಕ ನಾಯಕರಾಗಿ ಬೆಳೆಯುತ್ತೇವೆ ಎಂದುಕೊಂಡಿದ್ದಾರೆ.
ಹೇಳಿಕೆಗಳಿಂದ ನಾಯಕರಾಗಲ್ಲ. ಜನಪರ ಕೆಲಸ ಮಾಡಿ ನಾಯಕರಾಗಬೇಕು ಎಂದು ಬಿ.ವೈ. ವಿಜಯೇಂದ್ರ ಎದುರಾಳಿಗಳಿಗೆ ಚಾಟಿ ಬೀಸಿದರು.
ಬಿ.ವೈ. ರಾಘವೇಂದ್ರ ಹುಟ್ಟುಹಬ್ಬ ಹಿನ್ನೆಲೆ ಇಂದು ಶಿವಮೊಗ್ಗದ ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ವಾಜಪೇಯಿ ಅವರ ಬಗ್ಗೆ ಮಾತನಾಡುವುದು ಯಾವ ಪಕ್ಷದವರಿಗೂ ಶೋಭೆ ತರಲ್ಲ.
ಮಾತಿನಿಂದ ನಮ್ಮನ್ನು ಗುರುತಿಸಿಕೊಳ್ಳುವುದಲ್ಲ. ನಮ್ಮ ಕೆಲಸ ನೋಡಿ ಜನರು ಗುರುತಿಸಬೇಕು ಎಂದು ಕಿವಿಮಾತು ಹೇಳಿದರು.
ಯಡಿಯೂರಪ್ಪನವರು ಹೋರಾಟ ಮಾಡುವಾಗ ಶಿಕಾರಿಪುರದಿಂದ ಸೈಕಲ್ ಜಾಥಾ, ಪಾದಯಾತ್ರೆ ಹಮ್ಮಿಕೊಂಡಿದ್ದರು. ಮುಖ್ಯಮಂತ್ರಿ ಆಗಬೇಕೆಂದು ಈ ಹೋರಾಟ ಮಾಡ್ಲಿಲ್ಲ. ಜನರ ಸಮಸ್ಯೆ ಮುಂದಿಟ್ಟುಕೊಂಡು ಹೋರಾಟ ಮಾಡಿದರು.
ಯಡಿಯೂರಪ್ಪನವರು ಅಂದ್ರೆ ಅಭಿವೃದ್ಧಿ ಅಂತ ಜನರು ಮಾತನಾಡಿತ್ತಿದ್ದರು ಎಂದು ಹೇಳಿದರು.
ರಾಘಣ್ಣ ಇರಬಹುದು, ನಾನಿರಬಹುದು. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಯಾವುದೇ ಸ್ಥಾನಕ್ಕಾಗಿ ಕೆಲಸ ಮಾಡುತ್ತಿಲ್ಲ. ಯಡಿಯೂರಪ್ಪ ನವರು ಹೇಳಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇವೆ.
ರಾಘಣ್ಣ ಸಹ ಅದೇ ದಾರಿಯಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ ರಾಘಣ್ಣನವರನ್ನು ಎಲ್ಲರೂ ಮೆಚ್ಚಿದ್ದಾರೆ ಎಂದರು.
ನಮ್ಮದು ರಾಷ್ಟ್ರೀಯ ಪಕ್ಷ. ಪ್ರಾದೇಶಿಕ ಪಕ್ಷವಲ್ಲ. ಯಾರಿಗೆ ಯಾವ ಸ್ಥಾನ ನೀಡಬೇಕು ಎಂಬುದರ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.