ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಗೆಳೆಯರೊಂದಿಗೆ ಹೊಂಡದಲ್ಲಿ ಈಜಲು ಹೋಗಿದ್ದ ಬಾಲಕನೋರ್ವ ನೀರಲ್ಲಿ ಮುಳಗಿದ ದುರ್ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
Advertisement
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಅಗಸ್ತ್ಯ ತೀರ್ಥ ಹೊಂಡದಲ್ಲಿ ಈಜಲು ಹೋಗಿದ್ದ ಬ್ಯಾಡಗಿಯ ಹರ್ಷವರ್ಧನ ಅರಕೇರಿ (15) ಎಂಬಾತನೇ ನೀರಲ್ಲಿ ಮುಳಗಿದಾತ.
ದೀಪಾವಳಿ ಹಬ್ಬಕ್ಕೆ ಸಂಬಂಧಿಕರ ಮನೆಗೆ ಬಂದಿದ್ದ ಹರ್ಷವರ್ಧನ ಇಂದು ಪಕ್ಕದ ಮನೆಯ ಗೆಳೆಯರೊಂದಿಗೆ ಹೊಂಡಕ್ಕೆ ಈಜಲು ಹೋಗಿದ್ದ.
ಸುದ್ದಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯರೊಂದಿಗೆ ಹರ್ಷವರ್ಧನಗಾಗಿ ಶೋಧ ಕಾರ್ಯ ನಡೆಸಿದ್ದು, ಕುಟುಂಬದವರ ಆಕ್ರಂದನ ಹೇಳತೀರಾದಾಗಿದೆ. ಲಕ್ಷ್ಮೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.