ವಿಜಯಸಾಕ್ಷಿ ಸುದ್ದಿ, ಗದಗ
ಕಾರ ಹುಣ್ಣಿಮೆ ಸಂಭ್ರಮದಲ್ಲಿಯೂ ಕಾಂಗ್ರೆಸ್ ನ ಸಿಎಂ ಅಭ್ಯರ್ಥಿ ಬಗ್ಗೆ ಚರ್ಚೆಯಾಗಿದೆ. ಹೋರಿ ಮೇಲೆ ಮುಂದಿನ ಸಿಎಂ ಸಿದ್ಧರಾಮಯ್ಯ ಎಂದು ಅಭಿಮಾನಿಗಳು ಬರೆದು ಸಂಭ್ರಮಿಸಿದ್ದಾರೆ.
ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಕರಿ ಹರಿಯುವ ಸಂಭ್ರಮದಲ್ಲಿ ಈ ದೃಶ್ಯ ಕಂಡು ಬಂದಿದೆ. ಕಾರ ಹುಣ್ಣಿಮೆ ಪ್ರಯುಕ್ತ ಗ್ರಾಮೀಣ ಪ್ರದೇಶದಲ್ಲಿ ಕರಿ ಹರಿಯುವ ಸ್ಪರ್ಧೆ ಆಯೋಜಿಸಲಾಗಿತ್ತು.
ಹೋರಿಗಳಿಗೆ ಬಣ್ಣ ಹಚ್ಚಿ ಅಲಂಕರಿಸಿ ರೈತರು ಓಟಕ್ಕೆ ಹಚ್ಚುತ್ತಾರೆ. ಓಟದಲ್ಲಿ ಯಾವ ಹೋರಿ ಮೊದಲು ಬರುತ್ತದೆಯೋ ಆ ಹೋರಿಗೆ ಪ್ರಶಸ್ತಿ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬರೆದ ಹೋರಿ ಪ್ರಥಮ ಸ್ಥಾನ ಗಳಿಸಿದೆ. ಈ ಹೋರಿ ಬಸಪ್ಪ ಮಾಯಣ್ಣವರಿಗೆ ಸೇರಿದ್ದು ಎನ್ನಲಾಗಿದೆ.
ಕರಿ ಹರಿಯುವದರಲ್ಲಿ ಮುಂಚೂಣಿಯಲ್ಲಿ ಬಂದ ಸಿದ್ಧರಾಮಯ್ಯ ಹೋರಿ. ಕಾಂಗ್ರೆಸ್ ನ ಸದ್ಯದ ಸಿಎಂ ಚರ್ಚೆ ಸಿದ್ಧರಾಮಯ್ಯರಿಗೆ ವರದಾನವಾಯ್ತಾ? ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನೊಂದೆಡೆ ಹೈಕಮಾಂಡ್ ಗೆ ದೂರು ಸಲ್ಲಿಸುವ ಮೂಲಕ ಸಿದ್ದರಾಮಯ್ಯ ವರಿಗೆ ಡಿಕೆಶಿ ಲಾಭ ಮಾಡಿಕೊಟ್ಟರಾ? ಸಿದ್ಧರಾಮಯ್ಯ ಮುಂದಿನ ಸಿಎಂ ಆಗಲಿ ಎಂಬ ವಿಷಯಕ್ಕೆ ಡಿಕೆಶಿ ಮತ್ತುಷ್ಟು ಪುಷ್ಠಿ ನೀಡಿದರಾ? ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.