ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘವು ಯಾವುದೇ ಒಂದು ಜಾತಿಗೆ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡುತ್ತದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಜಿಲ್ಲಾ ನಿರ್ದೇಶಕ ಜನಾರ್ಧನ ತಿಳಿಸಿದರು.
ತಾಲೂಕಿನ ಅರಸೀಕೆರೆ ಗ್ರಾಮದ ಲಿಂಗೇಶ್ವರ ದೇವಸ್ಥಾನಕ್ಕೆ ಸೋಮವಾರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ 1.5 ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿ ಮಾತನಾಡಿದರು.
ನಮ್ಮ ಸಂಘದ ವತಿಯಿಂದ ಕೇವಲ ಸ್ತ್ರೀ ಯರ ಸಂಘಗಳಿಗೆ ಮಾತ್ರ ಲೋನ್ ನೀಡದೆ, ಗ್ರಾಮಗಳ ಅಭಿವೃದ್ಧಿಗಾಗಿ 40 ವಿವಿಧ ಯೋಜನೆಗಳನ್ನು ನೀಡಲಾಗುತ್ತಿದೆ. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ತಾಲೂಕು ಯೋಜನಾಧಿಕಾರಿ ಬಾಬು, ಪ್ರಶಾಂತ್ ಶೆಟ್ಟಿ, ಎಂ. ಪರುಸಪ್ಪ, ವೈ. ಕೊಟ್ರೇಶ್, ಟಿ.ಎಂ. ಶಿವಮೂರ್ತಯ್ಯ, ರಂಗಪ್ಪ, ಟಿ. ಪರುಸಪ್ಪ, ದೊಡ್ಡ ಹನುಮಂತಪ್ಪ, ಅಜ್ಜನಗೌಡ್ರು, ರಾಮಣ್ಣ, ಶೈಲಜಾ, ಕೊಟ್ರಮ್ಮ, ಗೀತಾ, ನಿರ್ಮಲ ಸೇರಿದಂತೆ ಇತರರಿದ್ದರು.


