ಕ್ರೇಟಾ ಕಾರ್ನಲ್ಲಿ ಸಾಗಾಟ ಮಾಡುತ್ತಿದ್ದ ಅಲ್ತಾಫ್ ಅಬ್ದುಲ್ ಕರೀಂ
Advertisement
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ರಸ್ತೆಯ ಗೋವನಾಳ ಬಳಿ ತೆರೆಯಲಾದ ಚೆಕ್ಪೋಸ್ಟ್ ನಲ್ಲಿ ಸೂಕ್ತ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 1.50ಲಕ್ಷ ರೂ. ನಗದನ್ನು ಬುಧವಾರ ವಶಪಡಿಸಿಕೊಳ್ಳಲಾಗಿದೆ.
ಕ್ರೇಟಾ ಕಾರ್ನಲ್ಲಿ ಸೂಕ್ತ ದಾಖಲಾತಿಗಳಿಲ್ಲದೇ ಸಾಗಿಸುತ್ತಿದ್ದ 1.50 ಲಕ್ಷ ರೂ. ನಗದನ್ನು ಅಲ್ತಾಫ್ ಅಬ್ದುಲಕರಿಂ ಅಕ್ಕಿಹೊಳೆ ಅವರಿಂದ ವಶಪಡಿಸಿಕೊಳ್ಳಲಾಗಿದೆ.
ಈ ವೇಳೆ ತಹಸೀಲ್ದಾರ ವಾಸುದೇವ ಎಂ.ಸ್ವಾಮಿ, ಪ್ಲಾಯಿಂಗ್ ಸ್ಕ್ವಾಡ್ ಮಹೇಶ ಹಡಪದ, ಪಿಎಸ್ಐ ಈರಣ್ಣ ರಿತ್ತಿ, ಭೀಮಸೇನ ಉಗ್ರದ ಸೇರಿ ಸಿಬ್ಬಂದಿಗಳಿದ್ದರು.