ಮಂಗಳೂರು: ಮಂಗಳೂರಿನಲ್ಲಿ ಆಘಾತಕಾರಿ ಘಟನೆಯೊಂದು ಜರುಗಿದೆ. ತಂದೆ ಸೇದಿ ಬಿಸಾಡಿದ್ದ ಬೀಡಿ ತುಂಡು ನುಂಗಿದ ಮಗು ದಾರುಣ ಸಾವಿಗೀಡಾಗಿರುವ ಘಟನೆ ಜರುಗಿದೆ. ಅನೀಶ್ ಮೃತಪಟ್ಟ ಮಗು. ಬೀಡಿ ತುಂಡು ಗಂಟಲಲ್ಲಿ ಸಿಲುಕಿಕೊಂಡು ಅಸ್ವಸ್ಥಗೊಂಡಿದ್ದ ಮಗು ಚಿಕಿತ್ಸೆ ಫಲಿಸದೇ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.
Advertisement
ಮನೆಯ ನೆಲದಲ್ಲಿ ಬಿದ್ದಿದ್ದ ಬೀಡಿ ತುಂಡನ್ನು ಮಗು ನುಂಗಿತ್ತು. ಸ್ವಲ್ಪ ಹೊತ್ತಲ್ಲೇ ಅಸ್ವಸ್ಥಗೊಂಡ ಮಗುವನ್ನು ಮನೆಯವರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಕೊನೆಯುಸಿರೆಳೆದಿದೆ.
ಘಟನೆಗೆ ಸಂಬಂಧಿಸಿದಂತೆ ಗಂಡನ ವಿರುದ್ಧ ಮಗುವಿನ ತಾಯಿ ಲಕ್ಷ್ಮಿ ದೇವಿ ದೂರು ನೀಡಿದ್ದಾರೆ. ಸೇದಿದ ಬೀಡಿಯ ತುಂಡನ್ನು ಮನೆಯೊಳಗೆ ಬಿಸಾಡಬೇಡಿ ಎಂದು ಎಷ್ಟು ಬಾರಿ ತಿಳಿಸಿದರೂ, ಕೇಳದೇ ಮತ್ತೆ ಬಿಸಾಕಿದ್ದಕ್ಕೆ ಹೀಗಾಯಿತು ಎಂದು ಮಗುವಿನ ತಾಯಿ ಬೇಸರ ಹೊರಹಾಕಿದ್ದಾರೆ.