10 ರೂ. ಆಸೆ ತೋರಿಸಿ 10 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ! ಆರೋಪಿ ಅರೆಸ್ಟ್

0
Spread the love

ಚಿಕ್ಕೋಡಿ: 10 ವರ್ಷದ ಬಾಲಕಿಗೆ 10 ರೂಪಾಯಿಯ ಆಸೆ ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಅರೆಸ್ಟ್‌ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ಅಸೀಫ್ ಭಾಗವಾನ್(70) ದೌರ್ಜನ್ಯ ಎಸಗಿದ ಕಾಮುಕನಾಗಿದ್ದು,

Advertisement

ಬಾಲಕಿಗೆ 10 ರೂಪಾಯಿಯ ಆಸೆ ತೋರಿಸಿ ಬಾಲಕಿಯ ಅಂಗಾಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದ. ಬಳಿಕ ಈ ವಿಷಯವನ್ನು ಬಾಲಕಿ ಪೋಷಕರ ಬಳಿ ತಿಳಿಸಿದ್ದಳು. ವಿಷಯ ತಿಳಿದು ಸ್ಥಳೀಯರು ಅಸೀಫ್‌ಗೆ ಧರ್ಮದೇಟು ನೀಡಿದ್ದರು. ಇದೀಗ ಕಾಮುಕ‌ ಅಸೀಫ್ ಭಾಗವಾನ್‌ನನ್ನು ನಿಪ್ಪಾಣಿ ಶಹರ ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


Spread the love

LEAVE A REPLY

Please enter your comment!
Please enter your name here