ಮಂಡ್ಯ:- ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ಮಾಡಲಾಗುತ್ತಿದೆ ಎಂದು ಗಣಿಗ ರವಿಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ MLA ಗಳ ಖರೀದಿಗೆ ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ, ಹಿಂದೆ 50 ಕೋಟಿ ಇದ್ದ ಆಫರ್ ಇದೀಗ 100 ಕೋಟಿಗೆ ಏರಿಕೆಯಾಗಿದೆ. ಎಂಎಲ್ಎ ಗಳ ಖರೀದಿ ಮಾಡಲು ಬಿಜೆಪಿಯವರು 100 ಕೋಟಿಗೆ ಹೋಗಿದ್ದಾರೆ. ನಿತ್ಯ ಸರ್ಕಾರ ಬಿಳಿಸಲು ಸಂಚು ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಮ್ಮ ಸರ್ಕಾರ ಗಟ್ಟಿ ಇದೆ ಅಲ್ಲಾಡಿಸಲು ಹಾಗಲ್ಲ. ಸಂತೋಷ್, ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ, ಪ್ರಹಲಾದ್ ಜೋಶಿಯಿಂದ ಕಾಂಗ್ರೆಸ್ ಅಸ್ಥಿರಕ್ಕೆ ತಂತ್ರ. ನಮ್ಮ ಸರ್ಕಾರ ಬಂಡೆಯಂತೆ ಗಟ್ಟಿ ಇರುವ ಸರ್ಕಾರ, ಈ ಸರ್ಕಾರ ಬಿಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸರ್ಕಾರ ಬೀಳಿಸಲು ಮೋದಿಗೆ ಈ ಐದು ಜನ ಮಾತು ಕೊಟ್ಟಿದ್ದಾರೆ.
ನಮ್ಮ ಶಾಸಕರಿಗೆ ಬಿಜೆಪಿಯ ಬ್ರೋಕರ್ ಗಳಿಂದ ಡಿಮ್ಯಾಂಡ್. ಆದರೆ ನಮ್ಮ ಶಾಸಕರು ಬಲಿಯಾಗಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಇದೆ ಆದ್ದರಿಂದಲೇ ಅಸ್ಥಿರ ಗೊಳಿಸಲು ಸಂಚು ಮಾಡ್ತಿದ್ದಾರೆ.
ಪ್ರತಿನಿತ್ಯ ಶಾಸಕರನ್ನ ಸಂಪರ್ಕ ಮಾಡ್ತಿದ್ದಾರೆ. ನೀವು ಬರ್ತಿರಾ? ನೀವು ಬರ್ತಿರಾ ಅಂತ ತಿರುಗುತ್ತಿದ್ದಾರೆ. ನಮ್ಮ ಶಾಸಕರು ಯಾರು ಹೋಗಲ್ಲ. ಕಾಂಗ್ರೆಸ್ ಸರ್ಕಾರ ಬಿಳಿಸೋದಕ್ಕೆ ಯಾವ ಬಿಜೆಪಿಯವರಿಗು ತಾಕತ್ ಇಲ್ಲ. 50 ರಿಂದ 100ಕೋಟಿಗೆ ಬಿಜೆಪಿ ಹೋಗಿದ್ದಾರೆ. ಸಾಕ್ಷಿ ಕಲೆ ಹಾಕುತ್ತಿದ್ದೇವೆ ಶೀಘ್ರದಲ್ಲೇ ಬಿಡ್ತೇವೆ. EDಗೆ ಕೊಡುವ ಕೆಲಸ ಮಾಡ್ತೇವೆ ಎಂದು ತಿಳಿಸಿದರು.