10ನೇ ವಾರ್ಷಿಕ ಸರ್ವ ಸಧಾರಣ ಸಭೆ

0
10th Annual General Meeting
Spread the love

ವಿಜಯಸಾಕ್ಷಿ ಸುದ್ದಿ, ಗದಗ : ರಾಣಿ ಚನ್ನಮ್ಮ ವಿವಿಧೋದ್ದೇಶಗಳ ಸಹಕಾರಿ ಸಂಘದ 10ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಜರುಗಿತು. ಬ್ಯಾಂಕಿನ ಅಧೀಕ್ಷ ಮಹೇಶ ಬಿ.ಗದಗಿನ (ಕರಿಬಿಷ್ಠಿ) ಸಭೆಯನ್ನುದ್ದೇಶಿಸಿ ಮಾತನಾಡಿ, ಸಂಸ್ಥೆಯನ್ನು ಎಲ್ಲರೂ ಸೇರಿ ಉನ್ನತ ಮಟ್ಟದಲ್ಲಿ ಬೆಳೆಸೋಣ. ಸಂಘದ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸ್ಪಂದಿಸಿ ಅವರಿಗೆ ಅವಶ್ಯವಿದ್ದಲ್ಲಿ ಮಾತ್ರ ಸಾಲವನ್ನು ನೀಡಿ ಸಾಲವನ್ನು ಮರುಪಾವತಿ ಮಾಡಿಸುವಲ್ಲಿ ಸಂಘದ ಸರ್ವ ಸದಸ್ಯರು ಹಾಗೂ ಪದಾಧಿಕಾರಿಗಳು ಸಹಕರಿಸುತ್ತಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

Advertisement

ಸಂಘದ ಉಪಾಧ್ಯಕ್ಷ ಚಂದ್ರಶೇಖರ ಪಿ.ಹುಣಸಿಕಟ್ಟಿ ಸಂಸ್ಥೆಯ ಏಳಿಗೆಗಾಗಿ ಶ್ರಮವಹಿಸಿದ ಎಲ್ಲ ನಿರ್ದೇಶಕರುಗಳಿಗೆ ಕೃತಜ್ಞತೆ ಸಲ್ಲಿಸಿ, ಭವಿಷ್ಯದಲ್ಲಿ ಕೂಡಾ ಇದೇ ರೀತಿ ಸಲಹೆ-ಸಹಕಾರ ನೀಡುತ್ತ ಸಂಘವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂದು ತಿಳಿಸಿದರು.

ಸಂಘದ ಮಾಜಿ ಅಧ್ಯಕ್ಷ ಎಮ್.ಎಸ್. ಪಾಟೀಲ, ನಿರ್ದೇಶಕರಾದ ಎಮ್.ಎಸ್. ಮಲ್ಲಾಪೂರ, ಶಿವಲೀಲಾ ಪಿ.ಅಕ್ಕಿ, ಸಂಸ್ಥೆಯ ವಕೀಲ ಆರ್.ವ್ಹಿ. ಕುಮಾರ ಮಾತನಾಡಿದರು. ನೀಲಮ್ಮ ಪಿ.ಕೊಣ್ಣೂರ ವರದಿ ವಾಚಿಸಿದರು. ಜಯಶ್ರೀ ಉಗಲಾಟದ ಸ್ವಾಗತಿಸಿದರೆ, ನಾಗರಾಜ ದಡವಾಡ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಸುರೇಶ ಗೋಡಿ, ಈರಣ್ಣ ಮಾನೇದ, ಮಾಲತೇಶಗೌಡ ಹಿರೇಮನಿಪಾಟೀಲ, ಸಂಘದ ಸಿಬ್ಬಂದಿ ಹಾಗೂ ಸರ್ವ ಸದಸ್ಯರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here