ವಿಜಯಸಾಕ್ಷಿ ಸುದ್ದಿ, ಬೆಳಗಾವಿ
Advertisement
ಕೌಟುಂಬಿಕ ಕಲಹದಿಂದ ಮನನೊಂದು 11 ತಿಂಗಳ ಮಗುವಿನೊಂದಿಗೆ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಮಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ.
ಕಲ್ಪನಾ ಮೋಹನ್ ಗುಡಾಜಿ (21), ಭೂಮಿಕಾ (11 ತಿಂಗಳ) ಮೃತರು. ಎರಡು ವರ್ಷದ ಹಿಂದಷ್ಟೆ ಬಿರನೋಳಿ ಗ್ರಾಮದ ಕಲ್ಪನಾಳನ್ನು ಮಣ್ಣಿಕೇರಿಯ ಮೋಹನ್ ಎಂಬಾತನೊoದಿಗೆ ವಿವಾಹ ಮಾಡಿಕೊಡಲಾಗಿತ್ತು.
ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಮಹಿಳೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಪತಿಯ ಜೊತೆಗೆ ವೈಮನಸ್ಸು ಹೊಂದಿದ್ದಳು. ಈ ಕಾರಣಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಗ್ರಾಮಸ್ಥರ ಸಹಾಯದೊಂದಿಗೆ ಮೃತದೇಹಗಳನ್ನು ಹೊರತೆಗೆದಿದ್ದಾರೆ.