ಲಕ್ನೋ: ಯಾವಾಗ ಓರ್ವ ಯುವತಿ ಮಧ್ಯ ರಾತ್ರಿ 12 ಗಂಟೆಗೆ ರಸ್ತೆ ಮೇಲೆ ಯಾವುದೇ ಭಯವಿಲ್ಲದೆ ಓಡಾಡುತ್ತಾಲೋ ಆಗಲೇ ದೇಶಕ್ಕೆ ಸ್ವಾತಂತ್ರ್ಯ ಬರೋದು ಎಂಬ ಮಾತೊಂದಿತ್ತು,. ಆದರೆ ಇಡೀ ದೇಶದಲ್ಲಿ ಈಗಲೂ ಹೆಣ್ಮಕ್ಕಳಿಗೆ ಯಾವುದೇ ಸುರಕ್ಷತೆ ಇಲ್ಲ.
ದಿನಕ್ಕೊಂದು ರೇಪ್ ಕೇಸ್ಗಳು ದಾಖಲಾಗುತ್ತಿವೆ. ಇದೀಗ ಉತ್ತರ ಪ್ರದೇಶದ ರಾಂಪುರ್‌ನಲ್ಲಿ ಕಿವಿ ಕೇಳಿಸದ, ಮಾತು ಸಹ ಬಾರದ 11ರ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಖಾಸಗಿ ಭಾಗಗಳಿಗೆ ಸಿಗರೇಟ್‌ನಿಂದ ಸುಟ್ಟು ವಿಕೃತಿ ಮೆರೆದಿರುವ ಘಟನೆ ನಡೆದಿದೆ.
ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ದೇಹದ ವಿವಿಧ ಭಾಗಗಳಲ್ಲಿ ಕಚ್ಚಿದ ಹಾಗೂ ಖಾಸಗಿ ಭಾಗಗಳಿಗೆ ಸಿಗರೇಟ್‌ನಿಂದ ಸುಟ್ಟ ಗುರತುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವ ಶಂಕಿತನನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ವೈದ್ಯಕೀಯ ಪರೀಕ್ಷೆ ನಡೆಸಿದ ಡಾ. ಅಂಜು ಸಿಂಗ್ ಅವರು, ಇದು ಒಂದಕ್ಕಿಂತ ಹೆಚ್ಚಿನ ವ್ಯಕ್ತಿಗಳು ನಡೆಸಿದ ಕೃತ್ಯ ಎಂಬುದು ಸ್ಪಷ್ಟವಾಗಿದೆ. ಖಾಸಗಿ ಭಾಗಗಳಲ್ಲಿ ಗಾಯದ ಗುರುತುಗಳಿವೆ, ಆಕೆಯ ಮುಖಕ್ಕೆ ಬಲವಾಗಿ ಹೊಡೆದಿರುವುದರಿಂದ ಮುಖ ಊದಿಕೊಂಡಿದೆ, ಅಲ್ಲದೇ ದೇಹದ ವಿವಿಧ ಭಾಗಗಳಲ್ಲಿ ಕಚ್ಚಿರುವ ಗುರುತುಗಳಿವೆ. ಅಷ್ಟಲ್ಲದೇ ಹುಡುಗಿಯ ಬಟ್ಟೆ ಪೂರ್ತಿ ರಕ್ತದ ಕಲೆಗಳಿಂದ ಕೂಡಿತ್ತು ಎಂದು ವಿವರಿಸಿದ್ದಾರೆ.
ಸದ್ಯ ವೈದ್ಯಕೀಯ ಪರೀಕ್ಷೆ ಪೂರ್ಣಗೊಳಿಸಲಾಗಿದೆ. ಬಾಲಕಿ ಭಯಭೀತಳಾಗಿದ್ದರಿಂದ ಆಕೆಯನ್ನ ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗಿದೆ. ಕೃತ್ಯ ನಡೆದಾಗಿನಿಂದ ಬಾಲಕಿಗೆ ಆತಂಕಗೊಂಡಾಗಲೆಲ್ಲ ಫಿಟ್ಸ್ ಬರುತ್ತಿದೆ ಎಂದು ಆಕೆಯ ತಾಯಿ ಅಳಲು ತೋಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.