ಬಾಯ್‌ಫ್ರೆಂಡ್ ಫೋನ್ ನಲ್ಲಿ 13 ಸಾವಿರ ನಗ್ನ ಫೋಟೋ: ಠಾಣೆ ಮೆಟ್ಟಿಲೇರಿದ ಯುವತಿ

0
Spread the love

ಬೆಂಗಳೂರು:- ಬಾಯ್‌ಫ್ರೆಂಡ್ ಫೋನ್‌ನಲ್ಲಿ ತನ್ನ ಹಾಗೂ ವಿವಿಧ ಮಹಿಳೆಯರ 13 ಸಾವಿರ ನಗ್ನ ಫೋಟೋಗಳನ್ನು ಕಂಡ ಯುವತಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

Advertisement

ವೈಟ್ ಫೀಲ್ಡ್ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಯುವತಿಯು ಬೆಳ್ಳಂದೂರಿನಲ್ಲಿರುವ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಕಳೆದ ನಾಲ್ಕು ತಿಂಗಳನಿಂದ ಯುವಕನೊಬ್ಬನೊಂದಿಗೆ ಸಂಬಂಧದಲ್ಲಿದ್ದರು. ಆತ ಸಹ ಐದು ತಿಂಗಳುಗಳಿಂದ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ಇಬ್ಬರು ಸಂಬಂಧದಲ್ಲಿದ್ದ ಸಂದರ್ಭದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ತಮ್ಮಿಬ್ಬರ ಕೆಲ ಆತ್ಮೀಯ ಕ್ಷಣಗಳ ವಿಡಿಯೋವನ್ನ ಸಂತ್ರಸ್ತೆ ಡಿಲೀಟ್ ಮಾಡಲು ಮುಂದಾಗಿದ್ದರು. ಪ್ರಿಯತಮನ ಫೋನ್ ಅನ್ನು ಆತನಿಗೆ ತಿಳಿಯದೇ ತೆಗೆದುಕೊಂಡು ಫೋಟೋ ಗ್ಯಾಲರಿ ತೆರೆದಿದ್ದರು.

ಈ ವೇಳೆ ತನ್ನ, ತನ್ನ ಸಹದ್ಯೋಗಿಯೊಬ್ಬಳು ಸೇರಿದಂತೆ ವಿವಿಧ ಮಹಿಳೆಯರ ಸುಮಾರು 13 ಸಾವಿರ ನಗ್ನ ಫೋಟೋಗಳು ಆತನ ಫೋನ್​​ನಲ್ಲಿ ಪತ್ತೆಯಾಗಿವೆ.

ಈ ಎಲ್ಲ ಫೋಟೋಗಳನ್ನ ನೋಡಿ ವಿಚಲಿತಳಾದ ಆಕೆ ತಕ್ಷಣ ಆತನೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದಾಳೆ. ಅಲ್ಲದೇ ತಕ್ಷಣವೇ ಕಂಪನಿಯ ಲೀಗಲ್ ಎಕ್ಸಿಕ್ಯುಟಿವ್​ಗೆ ಮಾಹಿತಿ ರವಾನಿಸಿದ್ದಾರೆ. ಅದರನ್ವಯ‌ ನವೆಂಬರ್ 23ರಂದು‌ ಕಂಪನಿಯ ಪ್ರತಿನಿಧಿಯೊಬ್ಬರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು‌ ಬಂಧಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here