ಬೆಂಗಳೂರು: ಸೈಬರ್ ಖದೀಮರು ಹೊಸ ತಂತ್ರ ಬಳಸಿಕೊಂಡು ಬೆಂಗಳೂರಿನ 66 ವರ್ಷದ ನಿವೃತ್ತ ವ್ಯಕ್ತಿಯೊಬ್ಬರಿಂದ ₹1.62 ಕೋಟಿ ದೋಚಿದ ಘಟನೆ ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ವಂಚಕನು ತಾನು ಮುಂಬೈ ಸೈಬರ್ ಕ್ರೈಂ ಇಲಾಖೆಯ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು, ಸೆಪ್ಟೆಂಬರ್ 27ರಿಂದ ಅಕ್ಟೋಬರ್ 10ರವರೆಗೆ ಆ ವ್ಯಕ್ತಿಯನ್ನು ಡಿಜಿಟಲ್ ಬಂಧನದಲ್ಲಿಟ್ಟುಕೊಂಡಿದ್ದಾನೆ. ವೀಡಿಯೋ ಕಾಲ್ ಮೂಲಕ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡು, “ನಿಮ್ಮ ಹೆಸರಿನಲ್ಲಿ ಅಕ್ರಮ ಹಣದ ದಾಖಲೆ ಸಿಕ್ಕಿವೆ” ಎಂದು ಹೇಳಿ, ಭಯ ಹುಟ್ಟಿಸಿದ್ದಾನೆ.
ನಂತರ, ತನಿಖೆ ಹೆಸರಿನಲ್ಲಿ ಅವರ ಎಫ್‌ಡಿ ಹಾಗೂ ಬ್ಯಾಂಕ್ ಖಾತೆಗಳ ಹಣವನ್ನು ಐಸಿಐಸಿಐ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸೂಚಿಸಿದ್ದು, ಒಟಿಪಿ ಪಡೆದು ₹1.62 ಕೋಟಿ ಮೊತ್ತವನ್ನು ಕಿತ್ತುಕೊಂಡಿದ್ದಾನೆ.
ಸಂಪೂರ್ಣ ಘಟನೆ ಬಳಿಕ ವಂಚನೆಗೆ ಒಳಗಾದ ವ್ಯಕ್ತಿ ಪೊಲೀಸರಲ್ಲಿ ದೂರು ದಾಖಲಿಸಿದ್ದು, ಸೈಬರ್ ಕ್ರೈಂ ವಿಭಾಗ ಪ್ರಕರಣವನ್ನು ತನಿಖೆ ನಡೆಸುತ್ತಿದೆ.