ಸೋಮವಾರ ನಡೆದ IPL ಪಂದ್ಯದಲ್ಲಿ ಪ್ರಬಲ ಗುಜರಾತ್ ಟೈಟನ್ಸ್ ವಿರುದ್ಧ ರಾಜಸ್ತಾನ ರಾಯಲ್ಸ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ರಾಜಸ್ತಾನ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಗುಜರಾತ್ ವಿರುದ್ಧದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಜೈಸ್ವಾಲ್ 40 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 70 ರನ್ ಸಿಡಿಸಿದರು. ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ 14 ವರ್ಷದ ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲೇ ದಾಖಲೆಯ ಶತಕ ಸಿಡಿಸಿದರು.
ಇನ್ನೂ ಕೇವಲ 35 ಬಾಲ್ನಲ್ಲಿ ಶತಕ ಬಾರಿಸಿದ ವೈಭವ್, ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಗೆಲುವು ತಂದುಕೊಟ್ಟರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಸೂರ್ಯವಂಶಿ, ನಂಗೆ ತುಂಬಾನೇ ಖುಷಿ ಆಗ್ತಿದೆ. ಐಪಿಎಲ್‌ನಲ್ಲಿ ನನ್ನ ಮೊದಲ ಶತಕ ಮತ್ತು ಮೂರನೇ ಇನ್ನಿಂಗ್ಸ್. ಟೂರ್ನಮೆಂಟ್‌ಗೆ ಮುನ್ನ ಮಾಡಿದ ಪ್ರ್ಯಾಕ್ಟೀಸ್ನ ಫಲಿತಾಂಶ ಇಲ್ಲಿ ತೋರಿಸಲಾಗಿದೆ. ನಾನು ಚೆಂಡನ್ನು ನೋಡುತ್ತೇನೆ ಮತ್ತು ಆಡುತ್ತೇನೆ. ಜೈಸ್ವಾಲ್ ಜೊತೆ ಬ್ಯಾಟಿಂಗ್ ಮಾಡುವಾಗ ಒಳ್ಳೆಯ ಅನುಭವ ಸಿಗುತ್ತೆ. ಅವರು ನನಗೆ ಏನು ಮಾಡಬೇಕೆಂದು ಹೇಳುತ್ತಾರೆ. ಅವರು ಸಕಾರಾತ್ಮಕ ವಿಷಯಗಳನ್ನು ಮಾತ್ರ ತುಂಬುತ್ತಾರೆ. ಐಪಿಎಲ್‌ನಲ್ಲಿ 100 ರನ್ ಗಳಿಸುವುದು ನನ್ನ ಕನಸಾಗಿತ್ತು. ಇಂದು ನನಸಾಗಿದೆ. ನನಗೆ ಯಾವುದೇ ಭಯವಿಲ್ಲ. ನಾನು ಹೆಚ್ಚು ಯೋಚಿಸಲ್ಲ, ಆಟದತ್ತ ಗಮನ ಹರಿಸುತ್ತೇನೆ ಅನ್ನೋ ಮೂಲಕ ಶತಕದ ಹಿಂದ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.