ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜೂನ್ 4ರಂದು ಸಂಜೆ 6 ಗಂಟೆಗೆ ಕಸಾಪ ಕಾರ್ಯಾಲಯದ ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ 140ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
Advertisement
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ವಹಿಸುವರು. ನಾಲ್ವಡಿ ಕೃಷ್ಣರಾಜರ ಜನಪರ ಕಾರ್ಯಗಳ ಕುರಿತು ಬರಹಗಾರ ಬಸವರಾಜ ಗಣಪ್ಪನವರ ಉಪನ್ಯಾಸ ನೀಡುವರು. ಸಾಹಿತ್ಯ ಕಲಾ ಪೋಷಕರಾದ ಅಶೋಕ ಸತ್ಯರೆಡ್ಡಿ ಅತಿಥಿಗಳಾಗಿ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಸಾಹಿತ್ಯಾಭಿಮಾನಿಗಳು, ಪರಿಷತ್ತಿನ ಸದಸ್ಯರು ಪಾಲ್ಗೊಳ್ಳಬೇಕೆಂದು ಕಾರ್ಯದರ್ಶಿಗಳಾದ ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಡಿ.ಎಸ್. ಬಾಪುರಿ, ದತ್ತಪ್ರಸನ್ನ ಪಾಟೀಲ, ಶ್ರೀಕಾಂತ ಬಡ್ಡೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.