ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಿದೆ. ಸಿಡ್ನಿಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ರಿಷಭ್ ಪಂತ್ ಗೆ ಗಂಭೀರಗಾಯವಾಗಿದೆ. ಮಿಚೆಲ್ ಸ್ಟಾರ್ಕ್ ಅವರ ವೇಗದ ಚೆಂಡು ರಿಷಭ್ ಪಂತ್ ಅವರ ಬೈಸೆಪ್‌ಗೆ ಬಡಿದಿತು. ಚೆಂಡು ತುಂಬಾ ವೇಗವಾಗಿದ್ದು ಅದು ಪಂತ್ ಅವರ ಬೈಸೆಪ್ನಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡಿತು. ಕೂಡಲೇ ಮೈದಾನಕ್ಕೆ ಆಗಮನಿಸಿದ ಫಿಸಿಯೋ ಪಂತ್ ಕೈಗೆ ಬ್ಯಾಂಡೇಜ್ ಹಾಕಿದ್ದಾರೆ.
ನೋವಿನಿಂದ ಬಳಲುತ್ತಿದ್ದರೂ ಪಂತ್ ಮಾತ್ರ ತಮ್ಮ ಆಟವನ್ನು ಮುಂದುವರೆಸಿದ್ದರು. ಇಷ್ಟು ಮಾತ್ರವಲ್ಲದೆ, ಮುಂದಿನ ಕೆಲವು ಎಸೆತಗಳ ನಂತರ ಸ್ಟಾರ್ಕ್ ಅವರ ಒಂದು ಎಸೆತ ಪಂತ್ ಅವರ ಹೆಲ್ಮೆಟ್ ಗೆ ತಾಗಿತು. ಈ ಚೆಂಡಿನ ವೇಗ ಸುಮಾರು 144 ಕಿ.ಮೀ. ಇತ್ತು. ಹೀಗಾಗಿ ಸ್ವಲ್ಪ ಹೊತ್ತು ಪಂದ್ಯವನ್ನು ನಿಲ್ಲಿಸಬೇಕಾಯಿತು. ಮತ್ತೆ ಮೈದಾನಕ್ಕೆ ಓಡಿ ಬಂದ ಫಿಸಿಯೋ ಪಂತ್ ಅವರನ್ನು ತಪಾಸಣೆ ನಡೆಸಿ ಹೆಲ್ಮೆಟ್ ಅನ್ನು ಸಹ ತಪಾಸಣೆ ನಡೆಸಿದರು.



