14ನೇ ವರ್ಷದ ಪೌರ ಕಾರ್ಮಿಕರ ದಿನಾಚರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆ, ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಮಹಾ ಸಂಘ ಹಾಗೂ ಪೌರ ನೌಕರರ ಸಂಘಗಳ ಸಂಯುಕ್ತ ಆಶ್ರಯದಲ್ಲಿ 14ನೇ ವರ್ಷದ ಪೌರ ಕಾರ್ಮಿಕರ ದಿನಾಚರಣೆಯನ್ನು ನಗರಸಭೆ ಆವರಣದಲ್ಲಿ ಆಚರಿಸಲಾಯಿತು.

Advertisement

ದಿನಾಚರಣೆಯ ಅಂಗವಾಗಿ ಪೌರ ಕಾರ್ಮಿಕರ ಕ್ರೀಡಾಕೂಟವನ್ನು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಉದ್ಘಾಟಿಸಿದರು. ಕೃಷ್ಣಾ ಪರಾಪೂರ, ಆನಂದ ಬದಿ, ರಾಘವೇಂದ್ರ ಯಳವತ್ತಿ, ಹೆಚ್.ಎ. ಬಂಡಿವಡ್ಡರ, ಹೇಮೇಶ್ ಯಟ್ಟಿ, ನಾಗೇಶ ಬಳ್ಳಾರಿ, ಸಣ್ಣರಾಮಪ್ಪ ಬಳ್ಳಾರಿ, ವೆಂಕಟೇಶ್ ಬಳ್ಳಾರಿ, ಪರಶುರಾಮ ಶೇರಖಾನೆ, ಎ.ಎನ್. ಪುಣೇಕರ್, ಎಸ್.ವೈ. ಸಂಕನಗೌಡ್ರ, ಚಂದ್ರಶೇಖರ ಆರ್. ಹಾದಿಮನಿ, ಕೆಂಚಪ್ಪ ಪೂಜಾರ, ಅರವಿಂದ ಕುರ್ತಕೋಟಿ, ನಾಗವ್ವ ಮಲ್ಲಸಮುದ್ರ, ಲಕ್ಷ್ಮೀವ್ವ ನಡಗೇರಿ, ದುರ್ಗವ್ವ ಹಾದಿಮನಿ, ಹನಮಂತಪ್ಪ ಚಲವಾದಿ, ಸಣ್ಣಪ್ಪ ಬೋಳಮ್ಮನವರ, ಮುತ್ತು ಚಲವಾದಿ, ಮಲ್ಲಿಕ ಸಂಗಾಪೂರ ಉಪಸ್ಥಿತರಿದ್ದರು.

ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ:

  • 100 ಮೀ ಓಟ: ಸಾಗರ ದೊಡ್ಡಮನಿ (ಪ್ರಥಮ), ಬಾಲು ದೊಡ್ಡಮನಿ (ದ್ವಿತೀಯ), ಮುತ್ತು ಪೂಜಾರ (ತೃತೀಯ)

  • ಗುಂಡು ಎಸೆತ: ಸಂತೋಷ ಹಾದಿಮನಿ (ಪ್ರಥಮ), ಮಂಜುನಾಥ ಕಡಬೂರ (ದ್ವಿತೀಯ), ಹುಲಗಣ್ಣ ತೌಜಿನ್ (ತೃತೀಯ)

  • ಚಕ್ರ ಎಸೆತ: ಪರಶುರಾಮ ಗುಡಿಮನಿ (ಪ್ರಥಮ), ಮಂಜುನಾಥ ಕಡಬೂರ (ದ್ವಿತೀಯ), ಸುದೀಪ ಬಿಳೆಯಲಿ (ತೃತೀಯ) ಬಹುಮಾನ ಪಡೆದುಕೊಂಡರು.

ಮಹಿಳೆಯರ ವಿಭಾಗದಲ್ಲಿ:

  • ಗುಂಡು ಎಸೆತ: ಲಲಿತಾ ಕಾಳೆ (ಪ್ರಥಮ), ರಾಧಾ ಹಾಲಿನವರ (ದ್ವಿತೀಯ), ಮಂಜುಳಾ ಕುಲಾಯಿ (ತೃತೀಯ)

  • ಚಕ್ರ ಎಸೆತ: ಲಲಿತಾ ಕಾಳೆ (ಪ್ರಥಮ), ಮಂಜುಳಾ ಕುಲಾಯಿ (ದ್ವಿತೀಯ), ರಾಧಾ ಹಾಲಿನವರ (ತೃತೀಯ) ಬಹುಮಾನ ಪಡೆದರೆ,

  • ಕಬಡ್ಡಿ: ಜೈ ಭೀಮ ಕಬಡ್ಡಿ ತಂಡ ಪ್ರಥಮ ಮತ್ತು ಜ್ಯೋತಿ ಫುಲೆ ತಂಡ ದ್ವಿತೀಯ ಸ್ಥಾನ ಪಡೆದಿತು.

ಜೈ ಭೀಮ ಕಬಡ್ಡಿ ತಂಡದ: ಷಣ್ಮುಖ ಬೋಳಮ್ಮನವರ, ಆನಂದ ದೊಡ್ಡಮನಿ, ಮಂಜುನಾಥ ಕಡಬೂರ, ನೀಲಪ್ಪ ಬೋಳಮ್ಮನವರ, ಸಂತೋಷ ಹಾದಿಮನಿ, ಬಾಲರಾಜ ದೊಡ್ಡಮನಿ, ಸಾಗರ ದೊಡ್ಡಮನಿ

ಜ್ಯೋತಿ ಫುಲೆ ಕಬಡ್ಡಿ ತಂಡದ: ಭೀಮೇಶ ಯಟ್ಟಿ, ಹೆಗಡೆಪ್ಪ ಹೊಸಳ್ಳಿ, ಮಾಂತೇಶ ಮಣ್ಣಮ್ಮನವರ, ಮಂಜು ಸಿಕ್ಕಲಗಾರ, ಚಿದಾನಂದ ಮುಳಗುಂದ, ಸಿದ್ದಪ್ಪ ಬಿಳೆಯಲಿ, ಸಾಗರ ಹೊಸಳ್ಳಿ ಸಹಿತ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


Spread the love

LEAVE A REPLY

Please enter your comment!
Please enter your name here