ಮಳಿಗೆ ತೆರವಿಗೆ 15 ದಿನಗಳ ಗಡುವು

0
15 days deadline for vacating the shop
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಭರಮದೇವರ ವೃತ್ತದ ಬಳಿ ಇರುವ ಪುರಸಭೆ ಜಾಗೆಯಲ್ಲಿ ಅಕ್ರಮವಾಗಿ ಮಳಿಗೆಗಳನ್ನು ನಿರ್ಮಾಣ ಮಾಡುತ್ತಿರುವ ಕುರಿತು ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಮಂಗಳವಾರ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಅರ್ಪಿಸಿ ಅಕ್ರಮ ಮಳಿಗೆಗಳನ್ನು ತೆರವುಗೊಳಿಸಲು 15 ದಿನಗಳ ಗಡುವು ನೀಡಿದ್ದು, ಮಳಿಗೆಯ ನಿರ್ಮಾಣವಾಗಿರುವ ಜಾಗೆಯ ವಿಷಯ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ.

Advertisement

ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಮನವಿ ಸಲ್ಲಿಸಿದ ಸಂಘಟನೆಗಳು, ಪಟ್ಟಣದ ಭರಮದೇವರ ವೃತ್ತದ ಬಳಿ ಇರುವ ದೇಸಾಯಿಬಣ ಆಸ್ತಿಯ ಉರ್ದು ಶಾಲೆ ಪಕ್ಕದಲ್ಲಿರುವ ಜಾಗೆಯಲ್ಲಿ 6 ಮಳಿಗೆಗಳನ್ನು ಪುರಸಭೆಯಿಂದ ಯಾವುದೇ ಪರವಾನಗಿ ಇಲ್ಲದೆ ನಿರ್ಮಿಸಿದ್ದಾರೆ. ಕೂಡಲೇ ಅದನ್ನು ತೆರವುಗೊಳಿಸಿ ಅದೇ ಜಾಗದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗ್ರಂಥಾಲಯ ಅಥವಾ ಅಂಗನವಾಡಿ ನಿರ್ಮಿಸಬೇಕು. ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಅಕ್ರಮ ಕಟ್ಟಡವನ್ನು 15 ದಿನದೊಳಗೆ ತೆರವುಗೊಳಿಸದಿದ್ದಲ್ಲಿ ಹಿಂದೂ ಮಹಾ ಗಣಪತಿ ಸೇವಾ ಮಂಡಳಿ ಹಾಗೂ ಸನಾತನ ಹಿಂದೂ ಯುವಕ ಮಂಡಳ ಸದಸ್ಯರಿಂದ ನ್ಯಾಯ ಸಿಗುವವರೆಗೂ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪುರಸಭೆ ಮುಖ್ಯಾದಿಕಾರಿ ಮಹೇಶ ಹಡಪದ ಮನವಿ ಸ್ವೀಕರಿಸಿ ಮಾತನಾಡಿ, ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಲಾಗಿದೆ. ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಫಕ್ಕೀರೇಶ ಅಣ್ಣಿಗೇರಿ, ಮಂಜು ತಿಮ್ಮಣ್ಣವರ, ನವೀನ ಕುಂಬಾರ, ಅಮಿತ ಗುಡಗೇರಿ, ಸೋಮು ಗೌರಿ, ಫಕ್ಕೀರೇಶ ಬಸವನಾಯ್ಕರ, ಮುತ್ತು ಗೊಜನೂರ, ಹನುಮಂತ ರಾಮಗೇರಿ, ಕಿರಣ ಚಿಲ್ಲೂರ ಮಠ, ವಿಶ್ವ ದಾನಿ, ಮಂಜುನಾಥ ಬಳಗಾನೂರ, ಹಿಂದೂ ಮಹಾಸಭಾ ಗಣಪತಿ ಅಧ್ಯಕ್ಷರು ಸದಸ್ಯರು ಹಾಗೂ ಸನಾತನ ಹಿಂದೂ ಯುವಕ ಮಂಡಳದ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here