ಮಂಡ್ಯ:– ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಡಿ.ಹಲಸಹಳ್ಳಿ ಗ್ರಾಮದ ಜಮೀನೊಂದರಲ್ಲಿ 15 ಅಡಿ ಉದ್ದದ ಭಾರೀ ಗಾತ್ರದ ಹೆಬ್ಬಾವು ಸೆರೆಯಾಗಿರುವ ಘಟನೆ ಜರುಗಿದೆ. ಇದೇ ಗ್ರಾಮದ ರೈತ ಜಗದೀಶ್ ಎಂಬುವರ ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿತ್ತು.
Advertisement
ಕೂಡಲೇ ಹೆಬ್ಬಾವು ಕಂಡ ರೈತ ಭಯಭೀತರಾಗಿ ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟಿದ್ದಾರೆ. ಮಾಹಿತಿ ಆಧರಿಸಿ ಉರಗ ತಜ್ಞ ಜಗದೀಶ್ ಜೊತೆ ಅರಣ್ಯ ಅಧಿಕಾರಿ ಸ್ಥಳಕ್ಕೆ ಧಾವಿಸಿ, ಭಾರೀ ಉದ್ದದ ಹೆಬ್ಬಾವು ರಕ್ಷಣೆ ಮಾಡಲಾಗಿದೆ.
ಇನ್ನೂ ಭಾರೀ ಉದ್ದ ಗಾತ್ರದ ಹೆಬ್ಬಾವು ನೋಡಲು ಜನತೆ ಮುಗಿಬಿದ್ದ ದೃಶ್ಯ ಕೂಡ ಕಂಡು ಬಂದಿದೆ.