ರಾಯಚೂರು:-ಮನೆಯೊಂದರ ಮುಂದೆ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಆತಂಕಗೊಂಡ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಜರುಗಿದೆ.
Advertisement
ಮಾನ್ವಿ ಪಟ್ಟಣದ ಕೋನಾಪುರ ಪೇಟೆಯ ಅಗಸೆ ಹತ್ತಿರ ಕಿನ್ನರಿ ಅವರ ಮನೆಯ ಮುಂದೆ ಈ ಹೆಬ್ಬಾವು ಕಂಡುಬಂದಿದೆ. ಮನೆ ಹಿಂದುಗಡೆ ಬೆಟ್ಟ-ಗುಡ್ಡ ಇರುವುದರಿಂದ ಹಿಂಬದಿಯಿಂದ 15 ಅಡಿಯ ಹೆಬ್ಬಾವು ಆಹಾರ ಸೇವನೆಗಾಗಿ ಹುಡುಕುತ್ತಾ ಬಂದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ತಕ್ಷಣವೇ ಸ್ಥಳೀಯರು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಉರಗ ತಜ್ಞರು ರಮೇಶ್ ವಿಜಯ್ ಆನಂದ ಸ್ಥಳಕ್ಕೆ ಆಗಮಿಸಿ, ಹೆಬ್ಬಾವನ್ನು ಕಾಡಿಗೆ ಬಿಟ್ಟಿದ್ದಾರೆ.