ವಿಜಯಸಾಕ್ಷಿ ಸುದ್ದಿ, ಗದಗ: ಭಾರತ ಹವಾಮಾನ ಇಲಾಖೆಯ (1875-2025), 150ನೇ ವರ್ಷದ ಸಂಸ್ಥಾಪನಾ ದಿನವನ್ನು ನಗರದ ಹವಾಮಾನ ಇಲಾಖೆಯಲ್ಲಿ ಬುಧವಾರ ಆಚರಿಸಲಾಯಿತು. ನಿವೃತ್ತ ಹವಾಮಾನ ತಜ್ಞ ನಟರಾಜ ಸವಡಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಹವಾಮಾನ ಇಲಾಖೆಯ ಪ್ರಬಾರಿ ಅಧಿಕಾರಿ ತಿಪ್ಪಲಕ್ಷ್ಮಿ ಕೆ.ಎಲ್. ಅವರು ಹವಾಮಾನದ ಇಲಾಖೆಯ ಇತಿಹಾಸ ಹಾಗೂ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು.
Advertisement
ಕಚೇರಿಯ ವೈಜ್ಞಾನಿಕ ಸಹಾಯಕರಾದ ಅಮಿತ್ ಕುಮಾರ, ಹೃಷಿಕೇಶ ತಿವಾರಿ, ಪ್ರತೀಕ ದುಬೆ, ಪ್ರದೀಪ, ಸಂಗ್ರಾಮಸಿAಗ್ ತಾರಾಡೆ, ಎಚ್.ಸಿ. ಕಟ್ಟಿಮನಿ ಹವಾಮಾನ ಇಲಾಖೆಯ ಕೆಲಸದ ಸ್ವರೂಪ ಮತ್ತು ಪ್ರಾಮುಖ್ಯತೆಯ ಬಗ್ಗೆ ವಿವರವಾಗಿ ತಿಳಿಸಿದರು. ಈ ಕಾರ್ಯಕ್ರಮಕ್ಕೆ ಎಸ್‌ವಿಟಿ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.