ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ತಪ್ಪಿಸಿಕೊಳ್ಳಲು ಹೋಗಿದ್ದ ಬೈಕ್ ಸವಾರನ ಮೇಲೆ ಲಾಠಿ ಬೀಸಿದ ಪರಿಣಾಮ ಬೈಕ್ ಸವಾರ ಬಿದ್ದು ಗಾಯಗೊಂಡ ಘಟನೆ ಹಳೆಹುಬ್ಬಳ್ಳಿಯ ದೇವರ ಗುಡಿಹಾಳ ಬಳಿ ನಡೆದಿದೆ.
ಬೈಕ್ ಸವಾರ ರಹಮತ್ ಕಾಗದಗಾರ ಎಂಬಾತ ಗಾಯಗೊಂಡಾತ. ಈತ ದೇವರ ಗುಡಿಹಾಳ ಬಳಿ ಬೈಕ್ ನಲ್ಲಿ ಬರುತ್ತಿದ್ದಾಗ ಪಿಎಸ್ಐ ಸುಖಾನಂದ ಶಿಂದೆ ಎಂಬುವವರು ಬೈಕ್ ನಿಲ್ಲಿಸಿಲು ಸೂಚಿಸಿದ್ದಾರೆ. ಆದ್ರೆ ಬೈಕ್ ಸವಾರ ಬೈಕ್ ನಿಲ್ಲಸದೇ ಸ್ಪೀಡ್ ಜಾಸ್ತಿ ಮಾಡಿದ್ದಾನೆ. ಇದರಿಂದ ಸಿಟ್ಟಾದ ಪಿಎಸ್ಐ ಶಿಂದೆ ಲಾಠಿ ಬೀಸಿದ್ದಾರೆ. ಬೀಸಿದ ಲಾಠಿ ವೇಗವಾಗಿ ಹೊರಟಿದ್ದ ಬೈಕ್ ಬೀಳುವಂತೆ ಮಾಡಿದೆ. ಇದರಿಂದಾಗಿ ಬೈಕ್ ಸವಾರ ಬಿದ್ದು ಗಾಯಗೊಂಡಿದ್ದಾನೆ ಎನ್ನಲಾಗಿದೆ. ಆದರೆ ಕೆಲ ಮೂಲಗಳು ಹೇಳೋದೆ ಬೇರೆ. ಪಿಎಸ್ಐ ಬೀಸಿದ ಲಾಠಿ ಮುಖಕ್ಕೆ ಬಿದ್ದಿದೆ, ಹೀಗಾಗಿ ಸವಾರ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ ಅಂತ.
ಪೊಲೀಸರ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜನಸ್ನೇಹಿಯಾಗಿ ವರ್ತಿಸಬೇಕಾದ ಪೊಲೀಸರೇ ಈ ರೀತಿ ವರ್ತಿಸಿದರೆ ಹೇಗೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಾ ಇದೆ.
ಗಾಯಗೊಂಡ ರಹಮತ್ ಕಿಮ್ಸ್ ಆಸ್ಪತ್ರೆಗೆ ದಾಖಾಲಾಗಿದ್ದಾನೆ.