ಗದಗ: ಬಿಂಕದಕಟ್ಟಿ ಮೃಗಾಲಯದಲ್ಲಿದ್ದ 16 ವರ್ಷದ ಹೆಣ್ಣು ಹುಲಿ ಸಾವು!

0
Spread the love

ಗದಗ:- ಗದಗದ ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷ 4 ತಿಂಗಳಿನ ಹೆಣ್ಣು ಹುಲಿ ಸಾವನ್ನಪ್ಪಿದೆ. ವಯೋಸಹಜದಿಂದ ಶನಿವಾರ ತಡರಾತ್ರಿ ಅನಸೂಯಾ ಎಂಬ ಹೆಸರಿನ ಹೆಣ್ಣು ಹುಲಿ ಮೃತಪಟ್ಟಿದೆ. ಭಾನುವಾರ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಸೂಚನೆಯಂತೆ ಮೃಗಾಲಯ ಅಧಿಕಾರಿಗಳು, ಹುಲಿಯ ಅಂತ್ಯಕ್ರಿಯೆ ಮಾಡಿದ್ದಾರೆ.

Advertisement

ಅನಸೂಯಾಳನ್ನು 9ವರ್ಷದ ಪ್ರಾಯ ಇದ್ದಾಗ ಮೈಸೂರು ಮೃಗಾಲಯದಿಂದ ಗದಗನ ಬಿಂಕದಕಟ್ಟಿ ಮೃಗಾಲಯಕ್ಕೆ ತರಲಾಗಿತ್ತು. ಮೃಗಾಲಯಕ್ಕೆ ತರುವ ಮೊದಲು ಹುಲಿಯ ಹಲ್ಲು, ದವಡೆ ಹಾನಿಯುಂಟಾಗಿತ್ತು.‌

ಕಳೆದ ಏಳು ವರ್ಷಗಳಿಂದಲೂ ಮಾಂಸ ಹಾಗೂ ಗಟ್ಟಿಯಾದ ಪದಾರ್ಥವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕಳೆದುಕೊಂಡಿತ್ತು. ಜೀರ್ಣವಾಗಲು ಅನುಕೂಲವಾಗುವಂತೆ ಸಣ್ಣದಾಗಿ ಕತ್ತರಿಸಿದ ಮಾಂಸ ನೀಡಲಾಗುತ್ತಿತ್ತು.

ಇದರಿಂದ ಅಂದಿನಿಂದಲೂ ಆಹಾರ ಜಗಿಯುವ ಸಮಸ್ಯೆ ಎದುರಿಸುತ್ತಿತ್ತು. ಅಲ್ಲದೇ, ವಯಸ್ಸು ಕೂಡ ಆಗಿದ್ದರಿಂದ ಹೆಣ್ಣು ಹುಲಿ ಅನಸೂಯಾ ಮೃತಪಟ್ಟಿದ್ದಾಳೆ. ಸಹಜವಾಗಿ ಹುಲಿಯ ಜೀವಿತಾವಧಿ 14ರಿಂದ 15 ವರ್ಷ ಮಾತ್ರ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here