ದೊಡ್ಡಪ್ಪನ ಮಗನಿಂದಲೇ 17 ವರ್ಷದ ಬಾಲಕಿ ಗರ್ಭಿಣಿ!

0
Spread the love

ಚಿಕ್ಕಮಗಳೂರು:- ದೊಡ್ಡಪ್ಪನ ಮಗನಿಂದಲೇ 17 ವರ್ಷದ ಬಾಲಕಿ ಗರ್ಭಿಣಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ತಾಲೂಕಿನ ಕುಗ್ರಾಮದಲ್ಲಿ ಜರುಗಿದೆ.

Advertisement

ಮೊದಲ ವರ್ಷದ ಪಿಯುಸಿ ಓದುತ್ತಿರುವ 17 ವರ್ಷದ ಬಾಲಕಿಯನ್ನು ಆಕೆಯ ಅಣ್ಣನೇ 7 ತಿಂಗಳ ಗರ್ಭಿಣಿ ಮಾಡಿದ್ದು, ಈ ಕುರಿತು ಶೃಂಗೇರಿ ವಿಧಾನಸಭಾ ಕ್ಷೇತ್ರದ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತೆಗೆ ಪೊಲೀಸರು ಸಾಕಷ್ಟು ಕೌನ್ಸಿಲಿಂಗ್ ಮಾಡಿದ್ದರು. ಮೂರು ದಿನ ಕೌನ್ಸಿಲಿಂಗ್ ಮಾಡಿದರೂ ಕೂಡ ಬಾಲಕಿ ಯಾರೆಂದು ಹೇಳಿರಲಿಲ್ಲ. ಆದರೆ ಮೂರು ದಿನದ ಬಳಿಕ ಬಾಲಕಿ ಪೊಲೀಸರ ಮುಂದೆ ನಿಜ ಹೇಳಿದ್ದಾಳೆ.

ಪೊಲೀಸ್ ಠಾಣೆಯಲ್ಲಿ ಈಗ ಬಾಲಕಿಯ ದೊಡ್ಡಪ್ಪನ ಮಗ 20 ವರ್ಷದ ಪ್ರಕಾಶ್ (ಹೆಸರು ಬದಲಿಸಲಾಗಿದೆ) ವಿರುದ್ಧ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here