HomeKarnataka News18 ವರ್ಷದ ಯುವಕನ ಮರ್ಮಾಂಗ ಕತ್ತರಿಸಿದ ಮಂಗಳಮುಖಿಯರು: FIR ದಾಖಲು!

18 ವರ್ಷದ ಯುವಕನ ಮರ್ಮಾಂಗ ಕತ್ತರಿಸಿದ ಮಂಗಳಮುಖಿಯರು: FIR ದಾಖಲು!

For Dai;y Updates Join Our whatsapp Group

Spread the love

ಬೆಂಗಳೂರು:- 18 ವರ್ಷದ ಯುವಕನನ್ನ ಐವರು ಮಂಗಳ ಮುಖಿಯರ ಅಟ್ಟಹಾಸ ಮೆರೆದಿರುವ ಘಟನೆ ರಾಜಧಾನಿ ಬೆಂಗಳೂರಿನ ಪುಲಿಕೇಶಿನಗರ ಠಾಣಾ ವ್ಯಾಪ್ತಿಯ ಫ್ರೆಜರ್ ಟೌನ್ ನಲ್ಲಿ ಬೆಳಕಿಗೆ ಬಂದಿದೆ.

ಬಲವಂತವಾಗಿ ಹುಡುಗನೊಬ್ಬನಿಗೆ ಲಿಂಗ ಪರಿವರ್ತನೆ ಮಾಡಿಸಿರುವ ಆರೋಪ ಕೇಳಿ ಬಂದಿದೆ. ಮೂರು ವರ್ಷಗಳ ಹಿಂದೆ ಅಂಬೇಡ್ಕರ್‌ ಕಾಲೇಜ ಸಮೀಪದಲ್ಲಿದ್ದ ಟೀ ಅಂಗಡಿಯಲ್ಲಿ ಸಂತ್ರಸ್ತ ಕೆಲಸ ಮಾಡಿಕೊಂಡಿದ್ದ. ಚಿತ್ರ, ಅಶ್ವಿನಿ, ಕಾಜಲ್‌, ಪ್ರೀತಿ, ಮುಗಿಲ ಎಂಬುವವರು ಟೀ ಕುಡಿಯುವ ನೆಪದಲ್ಲಿ ಬಂದು ಯುವಕನನ್ನು ಪರಿಚಯ ಮಾಡಿಕೊಂಡಿದ್ದರು.

ನಮ್ಮ ಜತೆಗೆ ಬಂದರೆ ನಿನ್ನನ್ನು ಒಳ್ಳೆಯ ಮನೆಯಲ್ಲಿರಿಸಿ, ಸಂಪಾದನೆಯ ದಾರಿಯನ್ನು ಮಾಡಿಕೊಡುವುದಾಗಿ ಯುವಕನನ್ನು ಪುಸಲಾಯಿಸಿದ್ದಾರೆ. ಆದರೆ ಯುವಕ ಇದಕ್ಕೆ ಒಪ್ಪದೆ ಇದ್ದಾಗ, ಬಲವಂತವಾಗಿ ಬೆದರಿಸಿ ಟ್ಯಾನರಿ ರಸ್ತೆಯಲ್ಲಿದ್ದ ಮನೆಯಲ್ಲಿ ಯುವಕನನ್ನು ಇರಿಸಿಕೊಂಡಿದ್ದಾರೆ.

ಬಳಿಕ ಭಿಕ್ಷೆ ಬೇಡು ಇಲ್ಲದಿದ್ದರೆ ರೌಡಿಗಳಿಗೆ ಹೇಳಿ ನಿನ್ನ ತಂದೆ-ತಾಯಿಯನ್ನು ಕೊಲೆ ಮಾಡಿಸುತ್ತೇವೆ ಎಂದು ಹೆದರಿಸಿದ್ದಾರೆ. ಇವರ ಬ್ಲ್ಯಾಕ್‌ಮೇಲ್‌ಗೆ ಹೆದರಿದ ಯುವಕ ಸುಮಾರು ಮೂರು ವರ್ಷಗಳ ಕಾಲ ಭಿಕ್ಷಾಟನೆ ಮಾಡಿಸಿ ಹಣ ಸಂಪಾದಿಸಿದ್ದಾರೆ.

ಇತ್ತೀಚೆಗೆ ಈ ಮಂಗಳಮುಖಿಯರು ಯುವಕನಾಗಿಯೇ ಇಷ್ಟು ದುಡಿಯುತ್ತಿದ್ದಯಾ, ಹೆಣ್ಣಾದರೆ ಇನ್ನೂ ಎಷ್ಟು ಹಣವನ್ನು ಸಂಪಾದನೆ ಮಾಡಬಹುದು ಎಂದಿದ್ದಾರೆ. ಲಿಂಗ ಪರಿವರ್ತಿಸಿಕೊಂಡು ಹೆಣ್ಣಾಗು ಎಂದು ಬಲವಂತ ಮಾಡಿದ್ದಾರೆ.

ಒಪ್ಪದೆ ಇದ್ದಾಗ ಗಾಂಜಾ ಸೇವಿಸಿ, ಮದ್ಯಪಾನ ಮಾಡಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ. ಬಳಿಕ ಬಲವಂತವಾಗಿ ಇಂಜೆಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸಿ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಯುವಕ ಎಚ್ಚರಗೊಂಡ ಲಿಂಗ ಪರಿವರ್ತನೆ ಮಾಡಿದ್ದಾರೆ. ಅಕ್ರಮವಾಗಿ ಲಿಂಗ ಪರಿವರ್ತನೆ, ಅಶ್ಲೀಲ ಫೋಟೊ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಿದ್ದಲ್ಲದೆ ಮನಬಂದಂತೆ ಥಳಿಸಿ ಚಿತ್ರ ಹಿಂಸೆ ಕೊಟ್ಟಿದ್ದಾರೆ.

ಭಿಕ್ಷಾಟನೆ ಮಾಡುವಂತೆ ದೈಹಿಕ ಹಲ್ಲೆ, ಮಾನಸಿಕ ಹಿಂಸೆ ನೀಡಿದ್ದಾರೆ. ಕಳೆದ ಆಗಸ್ಟ್ 3 ರವರೆಗೆ ಮನೆಯಲ್ಲಿಯೇ ಕೂಡಿ ಹಾಕಿ, ಮನೆ ಮೇಲೆ ಕರೆದುಕೊಂಡು ಹೋಗಿ ಯಾವುದೋ ಪೂಜೆ ಮಾಡಿಸಿದ್ದಾರೆ. ನಂತರ ಹೇಗೋ ಇವರಿಂದ ತಪ್ಪಿಸಿಕೊಂಡ ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ್ದಾನೆ.

ಮಂಗಳಮುಖಿಯರಾದ ಚಿತ್ರಾ, ಪ್ರೀತಿ, ಕಾಜಲ್, ಅಶ್ವಿನಿ, ಮುಗಿಲಿ ಎಂಬ ಐವರ ವಿರುದ್ಧ ಸಂತ್ರಸ್ಥ ದೂರು ನೀಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!