ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಕೊಲ್ಹಾಪುರದ ಅಜ್ಜಿಯ ಮನೆಗೆ ಹೋಗುವುದಾಗಿ ನಾಪತ್ತೆಯಾಗಿದ್ದ 18 ವರ್ಷದ ಕರೀಷ್ಮಾ ಎಂಬಾಕೆ, 50 ವರ್ಷದ ಪ್ರಕಾಶ್ ಎಂಬುವರ ಜೊತೆಗೆ ವಿವಾಹ ಆಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ ಈದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಕರೀಷ್ಮಾ ಇದೀಗ ಪ್ರಕಾಶ್ ನನ್ನು ಬಿಟ್ಟು ಮನೆಗೆ ಓಡಿ ಬಂದಿದ್ದಾಳೆ. ಅಲ್ಲದೇ ಪ್ರಕಾಶನ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ಬಲವಂತಾಗಿ ಕರೆದುಕೊಂಡು ಹೋಗಿ ಮದುವೆಯಾಗಿದ್ದಾರೆ. ಅಲ್ಲದೇ ವಿಡಿಯೋ ತೋರಿಸಿ ನನ್ನ ಜೊತೆ ಕೆಟ್ಟದಾಗಿ ವರ್ತನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.
ಇದರಿಂದಾಗಿ ಮಗಳ ವಯಸ್ಸಿನ ಯುವತಿಯನ್ನು ಮದುವೆಯಾಗಿದ್ದ ಪ್ರಕಾಶ್‌ಗೆ ಇದೀಗ ಸಂಕಷ್ಟ ಎದುರಾಗಿದೆ. ಪ್ರಕಾಶ್ ನಿಂದ ತಪ್ಪಿಸಿಕೊಂಡು ತಂದೆ-ತಾಯಿ ಬಳಿಗೆ ಓಡಿ ಬಂದಿರುವ ಕರೀಷ್ಮಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪ್ರಕಾಶ್ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ನಾನು ಕೊಲ್ಹಾಪುರದಲ್ಲಿದ್ದೆ. ಕಾಲ್ ಮಾಡಿ ನನ್ನ ಹೋಟೆಲ್ ಗೆ ಕರೆದುಕೊಂಡು ಹೋಗಿದ್ದ. ಬಳಿಕ ನನಗೆ ಕೋಲ್ ಡ್ರಿಂಕ್ಸ್ ನಲ್ಲಿ ಏನೋ ಹಾಕಿ ರೂಮ್ಗೆ ಕರೆದುಕೊಂಡು ಹೋಗಿದ್ದ. ಯಾವ ಊರು ಏನ ಅಂತ ಹೇಳಿಲ್ಲ.
ನನ್ನ ಮಾತು ಕೇಳದೆ ಹೋದ್ರೆ ನನ್ನ ಮಾತು ಕೇಳದಿದ್ದರೆ ತಂದೆ, ತಾಯಿಯನ್ನು ಕೊಲ್ಲುವುದಾಗಿ ಹೆದರಿಸಿ ನನ್ನ ಮದುವೆಯಾಗಿದ್ದ. ಮದುವೆಯಾಗಿದ್ದು ಎಲ್ಲಿ ಅಂತಾನೂ ನನಗೆ ಗೊತ್ತಿಲ್ಲ. ನನ್ನ ತಂದೆ, ತಾಯಿ ವಿರುದ್ಧವೇ ದೂರು ಕೊಡು ಎಂದು ತಾಕೀತು ಮಾಡಿದ್ದ. ಆದರೆ ನಾನು ಪ್ರಕಾಶ್ ವಿರುದ್ಧವೇ ಪೊಲೀಸರಿಗೆ ದೂರು ನೀಡುವೆ. ವಿಡಿಯೋ ತೋರಿಸಿ ನನ್ನ ಜೊತೆ ಕೆಟ್ಟದಾಗಿ ವರ್ತನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.ಕುತೂಹಲ ಕೆರಳಿಸಿದ್ದ ಈ ಪ್ರಕರಣದ ಸತ್ಯಾಂಶ ಪೊಲೀಸರ ನಿಷ್ಪಕ್ಷಪಾತ ತನಿಖೆಯಿಂದ ಹೊರ ಬೀಳಲಿದೆ.